ತುಮಕೂರು: ಜಿಲ್ಲೆಯಲ್ಲಿ ಇಂದು 133 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೂವರು ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 2,411ಕ್ಕೆ ಮತ್ತು ಮೃತರ ಸಂಖ್ಯೆ 70 ತಲುಪಿದೆ.
ತುಮಕೂರಿನಲ್ಲಿಂದು 133 ಮಂದಿಗೆ ಕೊರೊನಾ, ಮೂವರು ಬಲಿ - ತುಮಕೂರು ಕೊರೊನಾ ನ್ಯೂಸ್
ತುಮಕೂರಿನಲ್ಲಿಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದಾರೆ. 133 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
Tumkur corona case
ತುಮಕೂರು ತಾಲೂಕಿನಲ್ಲಿ 44, ತುರುವೇಕೆರೆ 11, ಕೊರಟಗೆರೆ 15, ಕುಣಿಗಲ್ 13, ಗುಬ್ಬಿ 7, ಪಾವಗಡ ಮತ್ತು ಶಿರಾ ತಾಲೂಕಿನಲ್ಲಿ ತಲಾ 5, ತಿಪಟೂರು 25, ಚಿಕ್ಕನಾಯಕನಹಳ್ಳಿ ಮತ್ತು ಮಧುಗಿರಿ ತಾಲೂಕಿನಲ್ಲಿ ತಲಾ 4 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಇನ್ನೊಂದೆಡೆ, 104 ಮಂದಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 1,369 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ 972 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.