ಕರ್ನಾಟಕ

karnataka

ETV Bharat / state

ಸಚಿವ ನಾಗೇಶ್ ಮನೆಗೆ ಮುತ್ತಿಗೆ: 15 ಆರೋಪಿಗಳಿಗೆ 12 ದಿನ ಪೊಲೀಸ್ ಕಸ್ಟಡಿ ನೀಡಿದ ಕೋರ್ಟ್​​

ಶಿಕ್ಷಣ ಸಚಿವರ ಮನೆಗೆ ಎನ್​ಎಸ್​ಯುಐ ಕಾರ್ಯಕರ್ತರ‌ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 15 ಆರೋಪಿಗಳನ್ನು 12 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

12-days-police-custody-for-15-people-in-minister-nagesh-house-protest
ಸಚಿವ ನಾಗೇಶ್ ಮನೆ ಮುತ್ತಿಗೆ: 12 ದಿನ 15 ಮಂದಿ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್​​

By

Published : Jun 2, 2022, 9:34 PM IST

ತುಮಕೂರು:ಪರಿಷ್ಕೃತ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ. ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಿಪಟೂರಿನಲ್ಲಿಶಿಕ್ಷಣ ಸಚಿವ ಬಿ.ಸಿ‌‌ ನಾಗೇಶ್ ಮನೆಗೆ ಎನ್​ಎಸ್​ಯುಐ ಕಾರ್ಯಕರ್ತರ‌ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 15 ಆರೋಪಿಗಳನ್ನು 12 ದಿನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಬಂಧಿತ 15 ಮಂದಿ ಆರೋಪಿಗಳನ್ನು ತುಮಕೂರು ಜಿಲ್ಲಾ ನ್ಯಾಯಾಲಯಕ್ಕೆ ಇಂದು ಹಾಜರುಪಡಿಸಲಾಗಿತ್ತು. ಸಚಿವರ ಮನೆಗೆ ಮುತ್ತಿಗೆ ಹಾಕಿದ್ದ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕೀರ್ತಿ ಗಣೇಶ್, ಕಿರಣ್ ಕುಮಾರ್, ಮಹಮ್ಮದ್ ಖಲಿಂ, ಅಮೃತ್ ಕುಮಾರ್, ಮೊಹಮ್ಮದ್ ಹಜ್ಜ್, ಸೈಯದ್ ಸೋಯಲ್, ಅಹ್ಮದ್ ರೇಸಾರ್, ಶ್ರೀಕಾಂತ್, ಮಹಮ್ಮದ್ ಮ್ಮಾಜ್, ಸುಪ್ರೀತ್, ದಿಲೀಪ್, ಮನು, ಸಂಪತ್, ಶಶಾಂಕ್ ಬಂಧಿತ ಆರೋಪಿಗಳಾಗಿದ್ದಾರೆ. ಘಟನೆ ಸಂಬಂಧ ತಿಪಟೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:ನಾನು ಶಾಲೆಗೆ ಹೋಗುವಾಗ ಪಠ್ಯದಲ್ಲಿ ಶಿವ, ಗಣೇಶನ ಚಿತ್ರವೂ ಇತ್ತು: ಸಚಿವ ಕೋಟಾ ಶ್ರೀನಿವಾಸ್

ABOUT THE AUTHOR

...view details