ಕರ್ನಾಟಕ

karnataka

ETV Bharat / state

ತುಮಕೂರಿನಲ್ಲಿ 1,199 ಮಂದಿ ಸೋಂಕಿತರು ಪತ್ತೆ, ಇಬ್ಬರು ಸಾವು - ತುಮಕೂರು ಕೋವಿಡ್​ ವರದಿ

ತುಮಕೂರು ನಗರದಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಬೆಂಗಳೂರು-ತುಮಕೂರು ನಡುವೆ ಓಡಾಡುವವರು ಹೆಚ್ಚಿನ ಸಂಖ್ಯೆಯಿರುವ ಕಾರಣ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನಲಾಗುತ್ತಿದೆ.

tumkur
ತುಮಕೂರು

By

Published : Apr 22, 2021, 10:32 AM IST

ತುಮಕೂರು: ಜಿಲ್ಲೆಯಲ್ಲಿ ಬುಧವಾರ ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 5020 ಮಂದಿ ಸಕ್ರಿಯ ಸೋಂಕಿತರಿದ್ದಾರೆ.

ತುಮಕೂರು ನಗರದಲ್ಲಿಯೇ 637 ಮಂದಿ ಸೋಂಕಿತರು ಪತ್ತೆಯಾಗಿದ್ದು, ಗುಬ್ಬಿ ತಾಲೂಕಿನಲ್ಲಿ-109, ತಿಪಟೂರು-99, ಕುಣಿಗಲ್-74, ಪಾವಗಡ-65, ಚಿಕ್ಕನಾಯಕನಹಳ್ಳಿ-56, ಮಧುಗಿರಿ-48, ತುರುವೇಕೆರೆ-49, ಶಿರಾ-35, ಕೊರಟಗೆರೆಯಲ್ಲಿ 27 ಮಂದಿಗೆ ಸೋಂಕು ತಗುಲಿದೆ.

ತುಮಕೂರು ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ 21 ಮಂದಿ ಸೋಂಕಿತರು ಹಾಗೂ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ 48 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 69 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.

ರಾತ್ರಿ 9ಕ್ಕೆ ನಗರ ಸಂಪೂರ್ಣ ಸ್ತಬ್ದ

ಕೊರೊನಾ ನಿಯಂತ್ರಿಸಲು ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ. ನೈಟ್​ ಕರ್ಫ್ಯೂ ಅವಧಿಯನ್ನು 9 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಸೀಮಿತಗೊಳಿಸಿದೆ. ಹೀಗಾಗಿ ತುಮಕೂರು ನಗರದ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್​ಗಳು, ವಾಣಿಜ್ಯ ವಹಿವಾಟುಗಳು ಸಂಪೂರ್ಣ ಸ್ತಬ್ಧವಾಗಿದ್ದವು.

ನೈಟ್​ ಕರ್ಫ್ಯೂ: ತುಮಕೂರು ನಗರ ಸಂಪೂರ್ಣ ಸ್ತಬ್ಧ

ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ಜನ ಸಂಚಾರ ಕಡಿಮೆಯಾಗಿತ್ತು. ಪೊಲೀಸ್​ ಸಿಬ್ಬಂದಿ ಅಲ್ಲಲ್ಲಿ ಗಸ್ತು ತಿರುಗುತ್ತಾ ನೈಟ್ ಕರ್ಫ್ಯೂ ಸಂಪೂರ್ಣ ಜಾರಿಯಾಗುವಂತೆ ಪರಿಶೀಲನೆ ನಡೆಸುತ್ತಿದ್ದರು.

ABOUT THE AUTHOR

...view details