ತುಮಕೂರು:ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಇಂದು 112 ಮಂದಿಗೆ ಕೊರೊನಾ ಸೋಂಕು ತಗುಲಿದ್ದು ಇನ್ನೊಂದೆಡೆ 136 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಇಂದು ತುಮಕೂರು ತಾಲೂಕಿನಲ್ಲಿ 48 ಮಂದಿಗೆ ಸೋಂಕು ತಗುಲಿದ್ದು, ತಿಪಟೂರು ತಾಲ್ಲೂಕಿನಲ್ಲಿ 13 ಮಂದಿಗೆ, ಮಧುಗಿರಿ ತಾಲ್ಲೂಕಿನಲ್ಲಿ 12, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 11, ಗುಬ್ಬಿ ತಾಲ್ಲೂಕಿನಲ್ಲಿ 10, ಪಾವಗಡ ಮತ್ತು ತುರುವೇಕೆರೆ ತಾಲೂಕಿನಲ್ಲಿ ತಲಾ 7 ಮಂದಿಗೆ, ಕುಣಿಗಲ್ ತಾಲೂಕಿನಲ್ಲಿ ಮೂವರಿಗೆ ಹಾಗೂ ಶಿರಾ ತಾಲೂಕಿನಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿದೆ.