ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ 110 ಮಂದಿ ಪಿಎಫ್ಐ ಮುಖಂಡರ ಬಂಧನ: ಗೃಹ ಸಚಿವ ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಒಟ್ಟು 110 ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Home Minister Araga Jnanendra
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Oct 1, 2022, 7:13 AM IST

ತುಮಕೂರು: ರಾಜ್ಯದಲ್ಲಿ ಸುಮಾರು 110 ಮಂದಿ ಪಿಎಫ್‌ಐ ಮುಖಂಡರನ್ನು ಬಂಧಿಸಲಾಗಿದೆ. ಕೆಲವೊಂದು ಕಡೆ ಪಿಎಫ್ಐ ಕಛೇರಿಯನ್ನು ಬೀಗ ಮುದ್ರೆ ಮಾಡಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎನ್​​ಐಎ ತನಿಖೆ ನಡೆಸುತ್ತಿದೆ. ಈ ವೇಳೆ ಲ್ಯಾಪ್​​ಟ್ಯಾಪ್ ಹಾಗೂ ಕೆಲ ವಸ್ತುಗಳು ಸಿಕ್ಕಿವೆ. ಅದರಲ್ಲಿ ಏನೇನಿದೆ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ತುಮಕೂರಿನಲ್ಲಿ ಸಹ ಓರ್ವ ಪಿಎಫ್ಐ ಜಿಲ್ಲಾಧ್ಯಕ್ಷನನ್ನು ಬಂಧಿಸಲಾಗಿದೆ. ಇಲ್ಲಿ ಯಾವುದೇ ಕಚೇರಿ ಇಲ್ಲ. ಈಗಾಗಲೇ ಅವರ ಪರ್ಸನಲ್ ಬ್ಯಾಂಕ್ ಅಕೌಂಟ್​​ಗಳನ್ನು ಪರಿಶೀಲಿಸಲಾಗುತ್ತಿದೆ. ಅಲ್ಲದೇ, ಬಂಟ್ವಾಳದಲ್ಲಿ ಪಿಎಫ್ಐ ಟ್ರೈನಿಂಗ್ ಕಚೇರಿಯನ್ನ ಸೀಜ್ ಮಾಡಲಾಗಿದೆ ಎಂದರು.

ಆರ್​​ಎಸ್ಎಸ್ ಬ್ಯಾನ್ ಮಾಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಸಿದ್ದರಾಮಯ್ಯಗೆ ಪಿಎಫ್ಐ ಬ್ಯಾನ್ ಮಾಡಿದ್ದು ಇಷ್ಟ ಇಲ್ಲ. ಅವರಿಗೆ ದೇಶದ ಹಿತದೃಷ್ಟಿಗಿಂತ ವೋಟಿನ ಹಿತದೃಷ್ಟಿ ಮುಖ್ಯ. ಇದು ಚುನಾವಣಾ ವರ್ಷ. ಅವರ ವೋಟ್ ಬ್ಯಾಂಕ್​​ಗೆ ಹಾನಿಯಾಗದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಆರಗ ಜ್ಞಾನೇಂದ್ರ ಪ್ರತಿಕ್ರಿಯೆ..

ಪಿಎಫ್‌ಐ ಬ್ಯಾನ್​ ಮಾಡಬಾರದಿತ್ತು ಅಂತಾ ಹೇಳುವ ಬದಲು ಆರ್​ಎಸ್ಎಸ್ ಯಾಕೆ ಬ್ಯಾನ್ ಮಾಡಲ್ಲ ಎಂದು ಪ್ರಶ್ನಿಸಿದ್ದಾರೆ. ಆರ್​ಎಸ್ಎಸ್ ಒಂದು ದೇಶಭಕ್ತ ಸಂಘಟನೆ. ದೇಶದ ಎಲ್ಲಾ ಜನ ಇದನ್ನು ಸ್ವೀಕಾರ ಮಾಡಿದ್ದಾರೆ. ದೇಶಕ್ಕೆ ಪೂರಕವಾಗಿ ಬದುಕವಂತಹ ವ್ಯಕ್ತಿತ್ವಗಳನ್ನು ಪ್ರತಿನಿತ್ಯ ಆರ್​ಎಸ್ಎಸ್ ಬೆಳೆಸುತ್ತಿದೆ. ಹಾಗಾಗಿ ಆರ್​ಎಸ್ಎಸ್ ಪಿಎಫ್ಐಗೂ ತಾಳೆ ಹಾಕುವಂತಹದ್ದು ಅವರ ಕೆಟ್ಟ ಮನಸ್ಥಿತಿಗೆ ಒಂದು ಉದಾಹರಣೆ. ಇಂತಹ ವೋಲೈಕೆ ರಾಜಕಾರಣದಿಂದಲೇ ಅವರ ಪಕ್ಷ ದೇಶದಲ್ಲಿ ಮಣ್ಣು ಪಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪಿಎಫ್​ಐ ಬಂಧಿತರ ಮೊಬೈಲ್ ರಿಟ್ರೀವ್: ಸ್ಫೋಟಕ ಅಂಶಗಳು ಬಹಿರಂಗ

ABOUT THE AUTHOR

...view details