ತುಮಕೂರು: ಜಿಲ್ಲೆಯಲ್ಲಿ ಇಂದು 108 ಮಂದಿಯಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 3578ಕ್ಕೆ ತಲುಪಿದೆ. ಅಲ್ಲದೇ ಸೋಂಕಿನಿಂದಾಗಿ 6 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.
ಕೊರೊನಾಗೆ ತುಮಕೂರಿನಲ್ಲಿ 6 ಬಲಿ....108 ಜನರಿಗೆ ಸೋಂಕು, 100 ಮಂದಿ ಗುಣಮುಖ - Tumkur latest news
ಜಿಲ್ಲೆಯಲ್ಲಿಂದು ಮಹಾಮಾರಿ ಸೋಂಕಿಗೆ 6 ಮಂದಿ ಬಲಿಯಾಗಿದ್ದಾರೆ ಮತ್ತು 108 ಕೋವಿಡ್ ಪ್ರಕರಣಗಳು ವರದಿಯಾಗಿದೆ. ಈ ಮೂಲಕ ಮೃತರ ಸಂಖ್ಯೆ 114 ಮತ್ತು ಸೋಂಕಿತರ ಸಂಖ್ಯೆ 3578ಕ್ಕೆ ತಲುಪಿದೆ.

Tumkur corona cases
ತುಮಕೂರು ತಾಲೂಕಿನಲ್ಲಿ 57, ಕುಣಿಗಲ್ ನಲ್ಲಿ 10, ತುರುವೇಕೆರೆ ಮತ್ತು ತಿಪಟೂರು ತಾಲೂಕಿನಲ್ಲಿ ತಲಾ 9, ಪಾವಗಡದಲ್ಲಿ 5, ಗುಬ್ಬಿಯಲ್ಲಿ 4, ಕೊರಟಗೆರೆಯಲ್ಲಿ 6, ಮಧುಗಿರಿ ಮತ್ತು ಶಿರಾ ತಾಲೂಕಿನಲ್ಲಿ 3, ಚಿಕ್ಕನಾಯಕನಹಳ್ಳಿಯಲ್ಲಿ 2 ಸೋಂಕು ಪ್ರಕರಣ ವರದಿಯಾಗಿದೆ. ಇನ್ನೂ 6 ಮಂದಿ ಕೊನೆಯುಸಿರೆಳೆದಿದ್ದು ಮೃತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.
ಇನ್ನೊಂದೆಡೆಯಿಂದ 100 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.