ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಮುಷ್ಕರ: ತುಮಕೂರು ಕೆಎಸ್ಆರ್​ಟಿಸಿ ಘಟಕಕ್ಕೆ ಆದ ನಷ್ಟ ಎಷ್ಟು?

ಕೆಎಸ್ಆರ್​ಟಿಸಿ ನೌಕರರ ಮುಷ್ಕರ ಮುಂದುವರೆದಿದ್ದು, ಕೇವಲ ಬೆರಳೆಣಿಕೆಯಷ್ಟು ಬಸ್​​ಗಳು ಮಾತ್ರ ಪೊಲೀಸ್ ಭದ್ರತೆಯೊಂದಿಗೆ ಸಂಚರಿಸುತ್ತಿವೆ. ಇದರಿಂದಾಗಿ ತುಮಕೂರು ಕೆಎಸ್ಆರ್​ಟಿಸಿ ಘಟಕಕ್ಕೆ ಕನಿಷ್ಠ ಆದಾಯ ಸಂದಾಯವಾಗುತ್ತಿದೆ.

Tumkur
ತುಮಕೂರು

By

Published : Apr 10, 2021, 12:23 PM IST

ತುಮಕೂರು: ರಾಜ್ಯಾದ್ಯಂತ ಕೆಎಸ್ಆರ್​ಟಿಸಿ ನೌಕರರ ಮುಷ್ಕರ ಮುಂದುವರೆದಿದ್ದು, ಇದರಿಂದಾಗಿ ಕಳೆದ 2 ದಿನಗಳಿಂದ ಜಿಲ್ಲೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ತುಮಕೂರು ಘಟಕಕ್ಕೆ 1.20 ಕೋಟಿ ರೂ. ನಷ್ಟ ಸಂಭವಿಸಿದೆ.

ಮುಷ್ಕರ ಮುನ್ನ ಪ್ರತಿನಿತ್ಯ ಜಿಲ್ಲೆಯಲ್ಲಿ ವಿವಿಧ ಮಾರ್ಗಗಳಲ್ಲಿ 580 ಕೆಎಸ್ಆರ್​ಟಿಸಿ ಬಸ್​​ಗಳು ಸಂಚರಿಸುತ್ತಿದ್ದವು. ಇದರಿಂದ ತುಮಕೂರು ಕೆಎಸ್ಆರ್​ಟಿಸಿ ಘಟಕಕ್ಕೆ ಪ್ರತಿದಿನ 60 ಲಕ್ಷ ರೂ. ಸಂಗ್ರಹವಾಗುತ್ತಿತ್ತು. ಆದರೆ ಈಗ ಕೇವಲ ಬೆರಳೆಣಿಕೆಯಷ್ಟು ಬಸ್​​ಗಳು ಮಾತ್ರ ಪೊಲೀಸ್ ಭದ್ರತೆಯೊಂದಿಗೆ ಸಂಚರಿಸುತ್ತಿದ್ದು, ಇದರಿಂದಾಗಿ ತುಮಕೂರು ಕೆಎಸ್ಆರ್​ಟಿಸಿ ಘಟಕಕ್ಕೆ ಕನಿಷ್ಠ ಆದಾಯ ಸಂದಾಯವಾಗುತ್ತಿದೆ.

ತುಮಕೂರು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬಹುತೇಕ ಗ್ರಾಮೀಣ ಪ್ರದೇಶಗಳಿಗೆ ಖಾಸಗಿ ಬಸ್​​ ಸಂಚಾರ ವ್ಯವಸ್ಥೆಯಿದ್ದು, ಇನ್ನುಳಿದಂತೆ ಕೆಎಸ್ಆರ್​ಟಿಸಿ ಬಸ್​ಗಳಲ್ಲಿ ಓಡಾಡುತ್ತಿದ್ದ ಸಾರ್ವಜನಿಕರು ಕೂಡ ಖಾಸಗಿ ಬಸ್​​ಗಳ ಮೊರೆ ಹೋಗುತ್ತಿದ್ದಾರೆ. ಹೊರ ಜಿಲ್ಲೆಗಳಿಗೆ ಪ್ರಯಾಣ ಮಾಡುವವರು ಕೂಡ ಪ್ರಯಾಣವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದ್ದಾರೆ.

ಮುಷ್ಕರದ 2ನೇ ದಿನ ಕೇವಲ 20 ಕೆಎಸ್ಆರ್​ಟಿಸಿ ಬಸ್​ಗಳು ಮಾತ್ರ ಸಂಚರಿಸಿವೆ. ತುರುವೇಕೆರೆ ತಾಲೂಕು ವ್ಯಾಪ್ತಿಯಲ್ಲಿ 4, ತುಮಕೂರು ತಾಲೂಕು ವ್ಯಾಪ್ತಿಯಲ್ಲಿ 7, ಕುಣಿಗಲ್ ಮತ್ತು ಮಧುಗಿರಿ ತಾಲೂಕು ವ್ಯಾಪ್ತಿಯಲ್ಲಿ ತಲಾ 3 ಹಾಗೂ ಶಿರಾದಿಂದ ಕೇವಲ ಒಂದು ಕೆಎಸ್ಆಟ್​ಟಿಸಿ ಬಸ್ ಮಾತ್ರ ಸಂಚರಿಸಿವೆ ಎಂದು ತುಮಕೂರು ಕೆಎಸ್ಆರ್​​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details