ಕರ್ನಾಟಕ

karnataka

ETV Bharat / state

ಹಿಂಡಲಗಾ ಜೈಲಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಶಿಫ್ಟ್ - ಧಾರವಾಡದ 3 ನೇ ಸೆಷನ್ ಕೋರ್ಟ್

ಇಂದು ಅಧಿಕಾರಿಗಳು ಸಿಎಆರ್ ಮೈದಾನದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಿದ್ದರು. ವಿನಯ್ ಕುಲಕರ್ಣಿ ಪಾಲಿಗ್ರಾಫಿ ಪರೀಕ್ಷೆಗೆ ಸಿಬಿಐ ಅನುಮತಿ ಕೇಳಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಅಧಿಕಾರಿಗಳ ಮನವಿ ತಿರಸ್ಕರಿಸಿದೆ.

vinay-kulkarni-judicial-custody-till-nov-23
ಹಿಂಡಲಗಾ ಜೈಲಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಶಿಫ್ಟ್

By

Published : Nov 9, 2020, 1:50 PM IST

Updated : Nov 9, 2020, 4:49 PM IST

ಧಾರವಾಡ/ಬೆಳಗಾವಿ :ಜಿಪಂ ಸದಸ್ಯ ಯೋಗೇಶ್ ‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಧಾರವಾಡದ 3 ನೇ ಸೆಷನ್ ಕೋರ್ಟ್ ಆದೇಶಿಸಿದ ಹಿನ್ನೆಲೆ ಹಿಂಡಲಗಾ ಜೈಲಿಗೆ ಮರಳಿ ಕರೆತರಲಾಗಿದೆ.

ಹುಬ್ಬಳ್ಳಿಯಿಂದ ನೇರವಾಗಿ ಬೆಳಗಾವಿ ಹೊರವಲಯದ ಹಿಂಡಲಗಾ ಜೈಲಿಗೆ ಕರೆತರಲಾಗಿದೆ. ಮೂರು ದಿನಗಳ ಕಾಲ ವಿಚಾರಣೆ ಎದುರಿಸಿದ್ದ ಮಾಜಿ ಸಚಿವ ಕುಲಕರ್ಣಿ ಸುಸ್ತಾದವರಂತೆ ಕಂಡುಬಂದರು. ಐದು ಜನರ ಸಿಬಿಐ ಅಧಿಕಾರಿಗಳ ತಂಡ ವಿನಯ್ ಕುಲಕರ್ಣಿ ಅವರನ್ನು ಜೈಲಿಗೆ ಹಸ್ತಾಂತರಿಸಿ ಮರಳಿ ಧಾರವಾಡಕ್ಕೆ ತೆರಳಿದೆ. ಈ ವೇಳೆ ಜೈಲು ಆವರಣದಲ್ಲಿ ಬಿಗಿ‌ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ಹಿಂಡಲಗಾ ಜೈಲಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಶಿಫ್ಟ್

ಹುಬ್ಬಳ್ಳಿ ಸಿಎಆರ್ ಮೈದಾನಕ್ಕೆ ಎಸ್​ಪಿ ಕೃಷ್ಣಕಾಂತ್​​ ಭೇಟಿ:

ವಿನಯ್ ಕುಲಕರ್ಣಿಯನ್ನು ಜೈಲಿಗೆ ಶಿಫ್ಟ್ ಮಾಡುವುದಕ್ಕೂ ಮೊದಲು ಕಾನೂನು ಸುವ್ಯವಸ್ಥೆ ಡಿಸಿಪಿ ಕೃಷ್ಣಕಾಂತ್ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಜೈಲಿಗೆ ವಿನಯ್ ರವಾನಿಸುವ ಹಿನ್ನೆಲೆ, ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಇದರಿಂದಾಗಿ ಟ್ರಾಫಿಕ್ ಜಾಮ್​ ಉಂಟಾಗಿತ್ತು.

ಯೋಗೇಶ್ ‌ಗೌಡ ಕೊಲೆ ಪ್ರಕರಣಕ್ಕೆ ಸಂಬಂಧ ಸಿಬಿಐ ಮೂರು ದಿನಗಳ ಕಾಲ ವಿಚಾರಣೆಗೆಂದು ಕಸ್ಟಡಿಗೆ ತೆಗೆದುಕೊಂಡಿತ್ತು. ಇಂದು ಅಧಿಕಾರಿಗಳು ಸಿಎಆರ್ ಮೈದಾನದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರುಪಡಿಸಿದ್ದರು. ವಿನಯ್ ಕುಲಕರ್ಣಿ ಪಾಲಿಗ್ರಾಫಿ ಪರೀಕ್ಷೆಗೆ ಸಿಬಿಐ ಅನುಮತಿ ಕೇಳಿ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಅಧಿಕಾರಿಗಳ ಮನವಿ ತಿರಸ್ಕರಿಸಿ ಆದೇಶ ಹೊರಡಿಸಿತ್ತು.

Last Updated : Nov 9, 2020, 4:49 PM IST

ABOUT THE AUTHOR

...view details