ಬಳ್ಳಾರಿ:ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣದ ಸಲುವಾಗಿ ಪರಿಣಾಮಕಾರಿಯಾಗಿ ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದೆ. ಆದರೆ, ಇದು ಅಷ್ಟೇ ಡೇಂಜರಸ್ ವೆಪನ್ ಎಂದು ಬಳ್ಳಾರಿಯ ವಿಮ್ಸ್ ವೈದ್ಯ ಡಾ.ಅನಿಷ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು 53 ಸೆಕೆಂಡ್ಗಳ ವಿಡಿಯೋ ತುಣುಕನ್ನು ಹರಿಬಿಟ್ಟಿರುವ ಅವರು, ಸ್ಯಾನಿಟೈಸರ್ ಬಳಕೆ ಮಾಡೋವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಎಲ್ಲ ಸಮಯದಲ್ಲೂ ಸ್ಯಾನಿಟೈಸರ್ ಬಳಕೆ ಸೂಕ್ತವೇ? ವೈದ್ಯರ ಸಲಹೆಯೇನು? - Use of sanitizer
ಸ್ಯಾನಿಟೈಸರ್ನಲ್ಲಿ ಆಲ್ಕೋಹಾಲಿಕ್ ಕಂಟೆಂಟ್ ಇರೋದ್ರಿಂದ ಅಡುಗೆ ತಯಾರಿಸುವ ವೇಳೆಗೆ ಬಹಳ ಮುತು ವರ್ಜಿ ವಹಿಸಬೇಕು ಎಂದಿದ್ದಾರೆ. ಇದರ ಬಳಕೆ ಮಾಡೋದಕ್ಕಿಂತಲೂ ಮನೆಯಲ್ಲಿ ಸೋಪು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯೋದು ಸೂಕ್ತವೆಂದು ವೈದ್ಯ ಡಾ.ಅನಿಷ್ ಸಲಹೆ ನೀಡಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಸ್ಯಾನಿಟೈಸರ್ ಬಳಕೆ ಅನಿವಾರ್ಯತೆ ಇದೆ. ಅಲ್ಲಿ ಬೇರೆ ಮಾರ್ಗ ಇಲ್ಲದಂತಾಗಿದೆ. ಹೀಗಾಗಿ, ಸ್ಯಾನಿಟೈಸರ್ ಬಳಕೆ ಮಾಡೋದು ಕಡ್ಡಾಯವಾಗಿಬಿಟ್ಟಿದೆ. ಕೆಲವೊಮ್ಮೆ ನಾವು ಕೂಡ ಕೋವಿಡ್ ಕೇರ್ ಸೆಂಟರ್ನಲ್ಲಿರುವ ಸೋಪು ಮತ್ತು ನೀರಿನ ಬಳಕೆ ಮಾಡುತ್ತೇವೆ. ಆದರೆ, ಮನೆಗಳಲ್ಲಿ ಈ ಸ್ಯಾನಿಟೈಸರ್ ಬಳಕೆ ಮಾಡೋವಾಗ ಬಹಳ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ ಎಂದಿದ್ದಾರೆ.
ಸ್ಯಾನಿಟೈಸರ್ನಲ್ಲಿ ಆಲ್ಕೋಹಾಲಿಕ್ ಕಂಟೆಂಟ್ ಇರೋದ್ರಿಂದ ಅಡುಗೆ ತಯಾರಿಸುವ ವೇಳೆಗೆ ಬಹಳ ಮುತುವರ್ಜಿ ವಹಿಸಬೇಕೆಂದಿದ್ದಾರೆ. ಇದರ ಬಳಕೆ ಮಾಡೋದಕ್ಕಿಂತಲೂ ಮನೆಯಲ್ಲಿ ಸೋಪು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆಯೋದು ಸೂಕ್ತವೆಂದು ವೈದ್ಯ ಡಾ.ಅನಿಷ್ ಸಲಹೆ ನೀಡಿದ್ದಾರೆ.