ಕರ್ನಾಟಕ

karnataka

ಕೊಡಗಿನಲ್ಲಿ ಸೋಂಕಿತ ತಂದೆಯಿಂದ ಇಬ್ಬರು ಮಕ್ಕಳಿಗೆ ಕೊರೊನಾ!

By

Published : Jun 23, 2020, 3:36 PM IST

ಕೊಡಗು ಜಿಲ್ಲೆಯಲ್ಲಿ ಸೋಂಕಿತ ತಂದೆಯಿಂದ ಆತನ ಇಬ್ಬರು ಮಕ್ಕಳಿಗೂ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ.

Two more corona cases found in kodagu
Two more corona cases found in kodagu

ಕೊಡಗು: ಜಿಲ್ಲೆಯಲ್ಲಿಂದು ಮತ್ತೆ ಇಬ್ಬರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ರೋಗಿ-9215 ಮೂಲಕ ಆತನ ಮಕ್ಕಳಿಗೆ ಸೋಂಕು ಹರಡಿದೆ.

ಸೋಮವಾರಪೇಟೆ ತಾಲೂಕಿನ ಕೋವಿಡ್ ಸೋಂಕಿತ ವ್ಯಕ್ತಿಯ ಇಬ್ಬರು ಮಕ್ಕಳ ವರದಿ ಪಾಸಿಟಿವ್ ಬಂದಿದೆ. ನಿನ್ನೆ ಆರೋಗ್ಯ ಇಲಾಖೆ ವ್ಯಕ್ತಿಯ ಕುಟುಂಬದವರ ಗಂಟಲ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿತ್ತು.

ಇಂದು ವರದಿ ಪಾಸಿಟಿವ್ ಬಂದಿದ್ದು, ಜಿಲ್ಲಾಡಳಿತದಿಂದ ಅಧಿಕೃತ ಘೋಷಣೆ ಬಾಕಿ ಇದೆ. ಜಿಲ್ಲೆಯಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ ‌8ಕ್ಕೆ ಏರಿಕೆ ಆಗಿದೆ.

ABOUT THE AUTHOR

...view details