ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಸಂಘ-ಸಂಸ್ಥೆಗಳಿಂದ ನೆರವು ನೀಡುವುದು ಮುಂದುವರೆದಿದ್ದು, ಇಂದು ಟಿವಿಎಸ್ ಸಂಸ್ಥೆ ಆರ್ಥಿಕ ಹಾಗೂ ವೈದ್ಯಕೀಯ ಉಪಕರಣಗಳನ್ನೊಳಗೊಂಡ ತನ್ನ ನೆರವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದೆ.
ಕೋವಿಡ್ ವಿರುದ್ಧದ ಹೋರಾಟಕ್ಕೆ 4 ಕೋಟಿ ನೆರವು ನೀಡಿದ ಟಿವಿಎಸ್ ಮೋಟಾರ್ಸ್ - Fight against Corona
ಟಿವಿಎಸ್ ಮೋಟಾರ್ ಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ದೇಣಿಗೆಯ ಚೆಕ್, 3 ಕೋಟಿ ರೂ. ಮೌಲ್ಯದ 100 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಹಸ್ತಾಂತರಿಸಲಾಯಿತು.
TVS help
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಟಿವಿಎಸ್ ಮೋಟಾರ್ ಸಂಸ್ಥೆ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂ.ಗಳ ದೇಣಿಗೆಯ ಚೆಕ್, 3 ಕೋಟಿ ರೂ. ಮೌಲ್ಯದ 100 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಹಾಗೂ ವೈದ್ಯಕೀಯ ಪರಿಕರಗಳನ್ನು ಇಂದು ಹಸ್ತಾಂತರಿಸಲಾಯಿತು.
ಕೋವಿಡ್ ವಿರುದ್ದದ ಹೋರಾಟದಲ್ಲಿ ಸರ್ಕಾರದೊಂದಿಗೆ ಟಿವಿಎಸ್ ಮೋಟಾರ್ ಸಂಸ್ಥೆ ಕೈಜೋಡಿಸಿರುವುದನ್ನು ಸಿಎಂ ಶ್ಲಾಘಿಸಿದರು. ಟಿವಿಎಸ್ ಮೋಟಾರ್ ಸಂಸ್ಥೆ ಉಪಾಧ್ಯಕ್ಷ (ಕಾರ್ಪೊರೇಟ್ ಸಂಬಂಧಗಳು) ಕರುಣಾಕರ ರೆಡ್ಡಿ, ಹಾಗೂ ಸಹ ಉಪಾಧ್ಯಕ್ಷ ಸೇತುರಾಮನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Last Updated : May 25, 2021, 10:55 PM IST