ಹೊಸಪೇಟೆ: ನಗರದ ರೈಲ್ವೆ ಸ್ಟೇಷನ್ ಬಳಿಯ ಹೆಲ್ಎಲ್ಸಿ ಕಾಲುವೆಯಲ್ಲಿ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬಯಲು ಶೌಚಾಲಯಕ್ಕೆ ಹೋದ ಯುವಕ ನಾಪತ್ತೆ: ಪ್ರಕರಣ ದಾಖಲು - Young boy missing case
ಹೊಸಪೇಟೆಯ ಹೆಲ್ಎಲ್ಸಿ ಕಾಲುವೆ ಬಳಿ ಬಯಲು ಶೌಚಾಲಯಕ್ಕೆ ಹೋದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಯುವಕ ನಾಪತ್ತೆ
ಇಲ್ಲಿನ 6ನೇ ವಾರ್ಡ್ನ ಮುತ್ತ್ಯಾಲಮ್ಮ ದೇವಸ್ಥಾನ ಬಳಿಯ ನಿವಾಸಿ ಮಂಜುನಾಥ (27) ಕಾಣೆಯಾದ ಯುವಕ. ಮಂಜುನಾಥ ಪ್ರತಿದಿನ ಹೊರಗಡೆ ಬಯಲು ಶೌಚಾಲಯಕ್ಕೆ ಹೋಗುತ್ತಿದ್ದ. ಕಾಲುವೆ ಬಳಿ ನಿನ್ನೆ ಬೆಳಗ್ಗೆ ಬಯಲು ಶೌಚಾಲಯಕ್ಕೆ ಹೋದವನು ಮರಳಿ ಬಂದಿಲ್ಲ. ಎಲ್ಎಲ್ಸಿ ಕಾಲುವೆ ಬಳಿ ಚಪ್ಪಲಿ ದೊರೆತಿದ್ದು, ಮಂಜುನಾಥಗೆ ಈಜಲು ಬರುವುದಿಲ್ಲ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಅವರು, ಕೊರೊನಾ ಹಿನ್ನೆಲೆಯಲ್ಲಿ ಎರಡು ತಿಂಗಳು ಹಿಂದೆ ಹೊಸಪೇಟೆಗೆ ಬಂದಿದ್ದರು ಎಂದು ಮಂಜುನಾಥನ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.