ಕರ್ನಾಟಕ

karnataka

ETV Bharat / state

ನೈರುತ್ಯ ರೈಲ್ವೆ ವಲಯದಿಂದ ಇಂದಿನಿಂದ ಸಂಚಾರ ಸೇವೆ ಪುನಾರಂಭ...

ನೈರುತ್ಯ ರೈಲ್ವೆ ಇಲಾಖೆಯು ಕೆಲ ರೈಲು ಹಾಗೂ ವಿಶೇಷ ರೈಲುಗಳನ್ನು ಮತ್ತೆ ಆರಂಭಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.

Train
Train

By

Published : Sep 4, 2020, 12:08 PM IST

ಹುಬ್ಬಳ್ಳಿ: ಕೋವಿಡ್-19 ಕಾರಣದಿಂದಾಗಿ ಸ್ಥಗಿತಗೊಂಡಿದ್ದ ರೈಲು ಹಾಗೂ ವಿಶೇಷ ರೈಲುಗಳನ್ನು ಮತ್ತೆ ಆರಂಭಿಸುವುದಾಗಿ ನೈರುತ್ಯ ರೈಲ್ವೆ ಚಿಂತನೆ ನಡೆಸಿದ್ದು, ಪರೀಕ್ಷಾರ್ಥವಾಗಿ ರೈಲುಗಳು ಸಂಚರಿಸಲಿವೆ ಎಂದು ತಿಳಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ನೈರುತ್ಯ ರೈಲ್ವೆ ಇಲಾಖೆ, ಹುಬ್ಬಳ್ಳಿ–ಮೈಸೂರು–ಹುಬ್ಬಳ್ಳಿ ವಿಶೇಷ ಎಕ್ಸ್‌ಪ್ರೆಸ್‌ ರೈಲು (06581/06582) ಇಂದಿನಿಂದ ಸಂಚಾರ ಆರಂಭಿಸಲಿದೆ. ಮೈಸೂರು–ವಿಜಯಪುರ–ಮೈಸೂರು ವಿಶೇಷ ಎಕ್ಸ್‌ಪ್ರೆಸ್‌ ರೈಲು (06535/06536) ಸೆ.4 ರಿಂದ ಸೆ.9 ರವರೆಗೆ ಪರೀಕ್ಷಾರ್ಥವಾಗಿ ಸಂಚರಿಸಲಿದೆ‌ ಎಂದು ತಿಳಿಸಿದೆ.

ಯಶವಂತಪುರ–ಕಾರವಾರ–ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು (06585/06586) ಸಹ ಇಂದಿನಿಂದ ಸಂಚರಿಸಲಿದ್ದು, ಬೆಳಗಾವಿ–ಶೇಡಬಾಳ–ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್‌ ರೈಲು ಸೆ.5 ರಿಂದ 9ರವರೆಗೆ ಮತ್ತು ಬೆಂಗಳೂರು–ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ರೈಲು (06515/06516) ಸೆ.6 ರಿಂದ ವಾರಕ್ಕೆ ನಾಲ್ಕು ದಿನ ಸಂಚರಿಸಲಿದೆ ಎಂದು ತಿಳಿಸಲಾಗಿದೆ.

ಇನ್ನು ವೈಯಕ್ತಿಕ ಅಂತರ ಕಾಪಾಡಿಕೊಂಡು, ಪ್ರಯಾಣಿಕರು ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಥರ್ಮಲ್‌ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಮುಂಗಡವಾಗಿ ಬುಕಿಂಗ್‌ ಮಾಡಿದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details