ದಾವಣಗೆರೆ: ಜನ್ಮ ನೀಡಿದ ತಂದೆಯನ್ನೇ ಮಗನೊಬ್ಬ ಕೊಲೆ ಮಾಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದ ಕೂಗಳತೆಯಲ್ಲಿರುವ ಎಸ್.ಆರ್.ಕ್ಯಾಂಪ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ. ಎಸ್.ಆರ್. ಕ್ಯಾಂಪ್‌ನ ಮಂಜುನಾಥ (60) ಕೊಲೆಯಾದ ತಂದೆ. ತಿಪ್ಪೇಶ್ (23) ಕೊಲೆ ಮಾಡಿದ ಆರೋಪಿ ಪುತ್ರ ಎಂದು ಗುರುತಿಸಲಾಗಿದೆ. ಘಟನೆಯ ಹಿಂದಿನ ಕಾರಣ ತಿಳಿದುಬಂದಿಲ್ಲ.
ದಾವಣಗೆರೆಯಲ್ಲಿ ಜನ್ಮ ನೀಡಿದ ತಂದೆಯನ್ನೇ ಕೊಲೆಗೈದ ಮಗ - ದಾವಣಗೆರೆ ಕೊಲೆ ಸುದ್ದಿ
ಮಗನೊಬ್ಬ ತಂದೆಯನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದಿದೆ.
ತಂದೆಯನ್ನೇ ಕೊಲೆ ಮಾಡಿದ ಮಗ
ಮನೆಯ ವಿಚಾರದಲ್ಲಿ ತಂದೆ-ಮಗನ ನಡುವೆ ವಾಗ್ವಾದ ಉಂಟಾಗಿ ಗಲಾಟೆ ನಡೆದಿದೆ. ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ, ತಿಪ್ಪೇಶ್ ತನ್ನ ತಂದೆಯನ್ನೇ ಕೊಲೆಗೈದು ಪರಾರಿಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಶೋಧ ನಡೆಯುತ್ತಿದೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ.. ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಜೀವನ ಹೀಗಿತ್ತು