ರಾಯಚೂರು ಜಿಲ್ಲೆಯಲ್ಲಿಂದು 6 ಜನರಿಗೆ ತಗುಲಿದ ಕೊರೊನಾ - ಕೊರೊನಾ ವೈರಸ್
ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇಂದು ಕೂಡಾ 6 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
Six corona cases found in raichuru
ರಾಯಚೂರು :ಜಿಲ್ಲೆಯಲ್ಲಿ ಇಂದು ಆರು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 463ಕ್ಕೆ ಏರಿಕೆಯಾಗಿದೆ.
ತಾಲೂಕಿನ ಐವರು ಹಾಗೂ ಮಾನ್ವಿ ತಾಲೂಕಿನ ಒಬ್ಬರಿಗೆ ಸೋಂಕು ತಗುಲಿದೆ. ಇಂದು 172 ಜನರ ವರದಿ ನೆಗೆಟಿವ್ ಬಂದಿದ್ದು, 1,564 ಜನರ ವರದಿ ಬರುವುದು ಬಾಕಿಯಿದೆ.
ಜಿಲ್ಲೆಯಲ್ಲಿ 59 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಐಸೋಲೇಷನ್ ವಾರ್ಡ್ನಲ್ಲಿ 34 ಹಾಗೂ 25 ಜನರು ಕ್ವಾರಂಟೈನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 399 ಸೋಂಕಿತರು ಗುಣಮುಖರಾಗಿದ್ದಾರೆ.