ಮೈಸೂರು: ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಪಿಹೆಚ್‌ಡಿ ಪದವಿ ನೀಡಿ ಗೌರವಿಸಿತು.
ಮೈಸೂರು ವಿವಿಯಿಂದ ಪಿಹೆಚ್‌ಡಿ ಪದವಿ ಪಡೆದ ಸಂಜೀವ್ ಕುಮಾರ್ - Sanjeev Kumar
ಹಿರಿಯ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರು ವಿವಿ ಇವರಿಗೆ ಡಾಕ್ಟರೇಟ್ ನೀಡಿದೆ..

Sanjeev Kumar
ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವದ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಶ್ರೀ ಸಂಜೀವ್ ಕುಮಾರ್ ಅವರು ವಿ.ವಿಯ ಅಭಿವೃದ್ಧಿ ಅಧ್ಯಯನಗಳ ವಿಭಾಗದಲ್ಲಿ ಡಾ.ಶ್ರೀಜಯರ್ ದೇವರಾಜ್ ಅರಸ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿರುವ ʻMGNREGA, Rights, Processes and Sustainable Livelihood: A Critical Study in Karnataka’ ಮಹಾ ಪ್ರಬಂಧಕ್ಕೆ ಮೈಸೂರು ವಿ.ವಿ ಪಿಹೆಚ್‌ಡಿ ಪದವಿ ನೀಡಿತು.
ಹಿರಿಯ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಪ್ರಸ್ತುತ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೈಸೂರು ವಿವಿ ಇವರಿಗೆ ಡಾಕ್ಟರೇಟ್ ನೀಡಿದೆ.