ಕರ್ನಾಟಕ

karnataka

ETV Bharat / state

ಓದಿದ್ದು ಬಿಬಿಎಂ... ಹವ್ಯಾಸ ಮಾತ್ರ ಚಿತ್ರಕಲೆ... ಇದು ಈ ಯುವಕನ ಸಾಧನೆ - athani news

ಈ ವಿದ್ಯಾರ್ಥಿ ಓದಿದ್ದು ಬಿಬಿಎಂ ಆದರೆ, ಈತನ ಹವ್ಯಾಸ ಮಾತ್ರ ಚಿತ್ರಕಲೆ. 5 ರಿಂದ 10 ನಿಮಿಷದಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸೋದು ಈತನಿಗೆ ಕರತಲಾಮಲಕ. ಅಥಣಿ ತಾಲೂಕಿನ ಪ್ರಶಾಂತ್ ಹೊನಖಾಂಡೆ ಎಂಬುವವರೇ ಈ ಕಲೆ ಮೈಗೂಡಿಸಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

amateur-painting
ಬಿಬಿಎಂ ಓದಿ ಹವ್ಯಾಸಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡ ಅಥಣಿ ಯುವಕ

By

Published : Jan 6, 2020, 9:56 AM IST

Updated : Jan 6, 2020, 1:18 PM IST

ಬಳ್ಳಾರಿ: ಓದಿದ್ದು ಬಿಬಿಎಂ.. ಆದರೆ ಈತನ ಹವ್ಯಾಸ ಮಾತ್ರ ಚಿತ್ರಕಲೆ. 5 ರಿಂದ 10 ನಿಮಿಷದಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸೋದು ಈತನಿಗೆ ನೀರು ಕುಡಿದಷ್ಟೇ ಸಲೀಸು. ಇಂತಹ ಸಾಧನೆ ಮಾಡ್ತಿರುವವರು ಅಥಣಿ ತಾಲೂಕಿನ ಪ್ರಶಾಂತ್ ಹೊನಖಾಂಡೆ.

.. ಹವ್ಯಾಸ ಮಾತ್ರ ಚಿತ್ರಕಲೆ

ಬಾಲ್ಯದಲ್ಲೇ ಚಿತ್ರಕಲಾ ಶಿಕ್ಷಕರಾದ ಗಸ್ತಿ ಅವರು ಚಿತ್ರಕಲೆ ಬಗ್ಗೆ ಮಾರ್ಗದರ್ಶನ ಮಾಡಿದ್ದರು. ಅಂದಿನಿಂದ ಚಿತ್ರಕಲೆ ಆಸಕ್ತಿ ಬೆಳೆಸಿಕೊಂಡಿದ್ದು, ರಾಯಚೂರು, ಗುಲ್ಬರ್ಗ, ಬೆಂಗಳೂರು, ಬಳ್ಳಾರಿ, ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಚಿತ್ರ ಪ್ರದರ್ಶನ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದೇನೆ ಅಂತಾರೆ ಪ್ರಶಾಂತ್.

ಚಿತ್ರ ಬಿಡಿಸುವುದರಿಂದ ಮತ್ತು ಅವುಗಳನ್ನು ಪ್ರದರ್ಶನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ, ಸಂತೋಷ ನೀಡುತ್ತದೆ ಅನ್ನುವ ಈ ಚಿತ್ರಕಲಾವಿದ, ಸಂಪಾದನೆಯ ದೃಷ್ಟಿಯಿಂದ ಈ ಕಲೆ ಪ್ರದರ್ಶನ ಮಾಡುತ್ತಿಲ್ಲ. ನನ್ನ ಕಲೆ ಸೃಜನಾತ್ಮಕವಾಗಿ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳ್ತಾರೆ ಪ್ರಶಾಂತ್​.

ಶಾಹಪೂರದಲ್ಲಿ ಫೈನಲ್ ಕಂಪನಿಯಲ್ಲಿ ಕೆಲಸ ಮಾಡುವ ಇವರು, ಹವ್ಯಾಸಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧ ಚಿತ್ರಕಲಾ ಪ್ರಕಾರಗಳಾದ ಗ್ರಾಫೈಟ್, ಆಯಿಲ್ ವರ್ಕ್, ಆಕ್ರಾಲಿಕ್, ಪೆನ್ಸಿಲ್ ವರ್ಕ್, ವಾಟಲ್ ಕಲರ್, ಚಾರ್ ಕೋಲ್, ಪೋಟ್ರೇಟ್ ವರ್ಕ್ ಗಳನ್ನು 5 ರಿಂದ10 ನಿಮಿಷಗಳಲ್ಲಿ ಬಿಡಿಸುವ ಸೃಜನಾತ್ಮ ಕಲೆ ಕರಗತ ಮಾಡಿಕೊಂಡಿದ್ದಾರೆ.

ವಿಶೇಷವಾಗಿ ರೋಹಿಣಿ ಸಿಂದೂರಿ, ಸಾಲುಮರದ ತಿಮ್ಮಕ್ಕ, ದೋನಿ, ಪುನಿತ್ ರಾಜ್ ಕುಮಾರ್, ರವಿ ಡಿ ಚನ್ನಣ್ಣನವ್ ಜೊತೆಗೆ ಹಲವಾರು ಸಾಮಾಜಿಕ ಕಳಜಿ, ಪ್ರಸ್ತುತ ಸನ್ನಿವೇಶಗಳು, ಪರಿಸರ ಜಾಗೃತಿ, ಚಿಕ್ಕ ಮಕ್ಕಳ ಮೊಬೈಲ್ ಬಳಕೆ, ಜಾಗೃತಿ ಚಿತ್ರಗಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.

Last Updated : Jan 6, 2020, 1:18 PM IST

ABOUT THE AUTHOR

...view details