ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯು ಮುಂಬರುವ ಹಬ್ಬಕ್ಕಾಗಿ ವಿಶೇಷ ರೈಲುಗಳ ಸಂಚಾರ ಶುರು ಮಾಡುತ್ತಿದೆ. ಈ ವೇಳೆ ಅನಗತ್ಯವಾಗಿ ರೈಲು ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸುವ ಉದ್ದೇಶದಿಂದ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಮಾಡಲಾಗಿದೆ.
ಕೋವಿಡ್ ಎಫೆಕ್ಟ್: ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ - flat farm ticket fee
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಲು ನೈರುತ್ಯ ರೈಲ್ವೆ ಇಲಾಖೆಯು ಇಂದಿನಿಂದ ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ ಮಾಡಿದೆ.
flat farm ticket fee
ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಜನ ಸೇರದಂತೆ ಈ ನಿರ್ಧಾರ ಕೈಗೊಂಡಿದ್ದು, ಪ್ರಮುಖ ರೈಲ್ವೆ ನಿಲ್ದಾಣಗಳಾದ ಕೃಷ್ಣರಾಜಪುರಂ, ಬಂಗಾರ ಪೇಟೆ, ತುಮಕೂರು, ಹೊಸೂರು, ಧರ್ಮಪುರಿ, ಕೆಂಗೇರಿ, ಮಂಡ್ಯ , ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ಕಾರ್ಮೆಲಾರಂ ಮತ್ತು ವೈಟ್ ಫೀಲ್ಡ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಟಿಕೆಟ್ 10 ರೂಪಾಯಿ ಇದ್ದಿದ್ದನ್ನು 50 ರೂ.ಗೆ ಏರಿಕೆ ಮಾಡಲಾಗಿದೆ. ಈ ಆದೇಶ ಇಂದಿನಿಂದಲೇ ಜಾರಿಗೆ ಬರಲಿದ್ದು, ನವೆಂಬರ್ 10ರವರೆಗೆ ದರ ಹೆಚ್ಚಳ ಇರಲಿದೆ.
Last Updated : Oct 21, 2020, 9:56 AM IST