ಹುಬ್ಬಳ್ಳಿ: ರಾಜ್ಯದಲ್ಲಿ ಒಂದು ಕಡೆ ಭಾರೀ ಮಳೆಯಾಗುತ್ತಿದ್ದು, ಮತ್ತೆ ಕೆಲವೆಡೆ ಬರಗಾಲದ ಛಾಯೆ ಇನ್ನೂ ಮುಂದುವರೆದಿದೆ. ನಗರದಲ್ಲಿ ಬರಗಾಲದ ಬೇಗೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಇಲ್ಲಿನ ಜನರ ಮಳೆಗಾಗಿ ದೈವದ ಮೊರೆ ಹೋಗಿದ್ದಾರೆ.
ಮುನಿಸಿಕೊಂಡನಾ ವರುಣ... ಮಳೆಗಾಗಿ ದೈವದ ಮೊರೆ ಹೋದ ಹುಬ್ಬಳ್ಳಿ ಜನ - undefined
ಯುವಕನ ತಲೆ ಮೇಲೆ ರೊಟ್ಟಿ ಬೇಯಿಸುವ ಹೆಂಚನ್ನು ಇಟ್ಟು ಅದರ ಮೇಲೆ ಸೆಗಣಿಯನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸಲಾಗಿದೆ. ಈ ರೀತಿ ಮಾಡಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನವರ ನಂಬಿಕೆ.

ಮಳೆಗಾಗಿ ದೈವದ ಮೊರೆ ಹೋದ ಹುಬ್ಬಳ್ಳಿ ಜನ
ಭೀಕರ ಬರಗಾಲ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮಸ್ಥರು ಮನೆ ಮೆನೆಗೆ ತರಳಿ, 'ಗುರ್ಜಿ ಗುರ್ಜಿ ಹಳ್ಳಾಕೊಳ್ಳ ತೀರಗ್ಯಾಡಿ ಬಂದೇ ಬಾ ಮಳೆಯೆ ಬೇಗಾ ಮಳೆಯೆ...' ಎಂದು ಪದ ಹಾಡುವ ಮೂಲಕ ಮಳೆಗಾಗಿ ದೇವರನ್ನು ಪ್ರಾರ್ಥನೆ ಮಾಡುತ್ತಿದ್ದಾರೆ.
ಮಳೆಗಾಗಿ ದೈವದ ಮೊರೆ ಹೋದ ಹುಬ್ಬಳ್ಳಿ ಜನ
ಕುಸುಗಲ್ನ ಮಾರುತಿ ನಗರದ ನಿವಾಸಿಗಳೆಲ್ಲಾ ಸೇರಿ ಮಳೆಗಾಗಿ ಪ್ರಾರ್ಥನೆ ಮಾಡಿದ್ರು. ರಮೇಶ್ ಎಂಬ ಯುವಕನ ತಲೆ ಮೇಲೆ ರೊಟ್ಟಿ ಬೇಯಿಸುವ ಹೆಂಚನ್ನು ಇಟ್ಟು ಅದರ ಮೇಲೆ ಸೆಗಣಿಯನ್ನಿಟ್ಟು ಅದಕ್ಕೆ ಪೂಜೆ ಸಲ್ಲಿಸಲಾಗಿದೆ. ಈ ರೀತಿ ಮಾಡಿದರೆ ಮಳೆಯಾಗುತ್ತದೆ ಎಂಬುದು ಇಲ್ಲಿನವರ ನಂಬಿಕೆ.
Last Updated : Jun 23, 2019, 11:38 PM IST