ಕರ್ನಾಟಕ

karnataka

ETV Bharat / state

ಕವಿ ವರವರ ರಾವ್ 2 ದಿನಗಳ ಕಾಲ ಪೊಲೀಸರ ವಶಕ್ಕೆ... ಪಾವಗಡ ಕೋರ್ಟ್​ ಆದೇಶ - undefined

ಕೆಎಸ್ಆರ್​ಪಿ ಕ್ಯಾಂಪ್‌ ಮೇಲೆ ನಕ್ಸಲ್ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಪಾವಗಡ ಜೆಎಂಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕವಿ ವರವರ ರಾವ್ 2 ದಿನಗಳ ಕಾಲ ಪೊಲೀಸರ ವಶಕ್ಕೆ

By

Published : Jul 4, 2019, 6:44 PM IST

Updated : Jul 4, 2019, 7:16 PM IST

ತುಮಕೂರು: 2005ರ ಫೆ.5 ರಂದು ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ಕೆಎಸ್ಆರ್​ಪಿ ಕ್ಯಾಂಪ್‌ ಮೇಲೆ ನಕ್ಸಲ್ ದಾಳಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿ ವರವರ ರಾವ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿ ಪಾವಗಡ ಜೆಎಂಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಕವಿ ವರವರರಾವ್ ರನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ ಕೋರ್ಟ್......

ತಿರುಮಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಈ ಪ್ರಕರಣದಲ್ಲಿ ವರವರ ರಾವ್ 12ನೇ ಆರೋಪಿಯಾಗಿದ್ದರು. ಅಲ್ಲದೆ ಇವರ ವಿರುದ್ಧ ಚಾರ್ಜ್​ ಶೀಟ್ ಕೂಡ ದಾಖಲಾಗಿತ್ತು. ವರವರ ವಿರುದ್ಧ ಜಾಮೀನು ರಹಿತ ವಾರೆಂಟ್ ಕೂಡ ಜಾರಿಯಾಗಿತ್ತು. ಆದರೆ, ಪುಣೆಯ ಯೆರವಾಡ ಜೈಲಿನಲ್ಲಿ ಯುಟಿಪಿ ನಂಬರ್ 3669/11 ವಿಚಾರಣಾಧೀನ ಕೈದಿಯಾಗಿ ವರವರ ರಾವ್ ಇದ್ದರು. ಬಾಡಿ ವಾರೆಂಟ್​​ನೊಂದಿಗೆ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಇಂದು ಪಾವಗಡದ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಕೆಎಸ್ಆರ್​ಪಿ ಕ್ಯಾಂಪ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಒಟ್ಟು 78 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಕೆಲ ಆರೋಪಿಗಳು ಮೃತಪಟ್ಟಿದ್ದರೆ, 43 ಮಂದಿ ಕಣ್ಮರೆಯಾಗಿದ್ದಾರೆ. ಅಂದಿನ ನಕ್ಸಲ್ ದಾಳಿಯಲ್ಲಿ ಕೆಎಸ್ಆರ್​ಪಿ ಪೊಲೀಸರು ಸೇರಿ ಏಳು ಜನ ಮೃತಪಟ್ಟಿದ್ದರು.

ಇಂದು ಬೆಳಗ್ಗೆ ವರವರ ರಾವ್ ಅವರನ್ನು ಪುಣೆಯಿಂದ ಕರೆತಂದಿದ್ದ ಪೊಲೀಸರು ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಇರಿಸಿದ್ದರು. ನಂತರ ಬೆ. 9ಗಂಟೆ ಪಾವಗಡ ಜಿಎಂಎಫ್​ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ತುಮಕೂರು ಜಿಲ್ಲಾ ಕಾರಾಗೃಹದಿಂದ ಕರೆದೊಯ್ಯಲಾಗಿತ್ತು.

Last Updated : Jul 4, 2019, 7:16 PM IST

For All Latest Updates

TAGGED:

ABOUT THE AUTHOR

...view details