ಕೊಡಗು:ಜಿಲ್ಲೆಯಲ್ಲಿ ಕೊರೊನಾಗೆ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದು ಸೋಂಕಿನಿಂದ ಇದುವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 18ಕ್ಕೆ ಏರಿಕೆಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ: 18ಕ್ಕೇರಿದ ಮೃತರ ಸಂಖ್ಯೆ..! - ಕೊಡಗು ಕೊರೊನಾ ಸುದ್ದಿ
ವಿರಾಜಪೇಟೆ ತಾಲೂಕಿನ ಐಮಂಗಲ ಗ್ರಾಮದ 55 ವರ್ಷದ ವ್ಯಕ್ತಿಯೋರ್ವ ಮಹಾಮಾರಿ ಕೊರೊನಾದಿಂದ ಇಂದು ಮೃತಪಟ್ಟಿರುವುದಾಗಿ ವರದಿಯಾಗಿದೆ.
Kodagu
ವಿರಾಜಪೇಟೆ ತಾಲೂಕಿನ ಐಮಂಗಲ ಗ್ರಾಮದ 55 ವರ್ಷದ ವ್ಯಕ್ತಿಯೋರ್ವ ಸೊಂಕಿನಿಂದ ಮೃತಪಟ್ಟಿದ್ದು ಮೃತನು ರಕ್ತದ ಒತ್ತಡ, ಸಕ್ಕರೆ ಕಾಯಿಲೆ ಮತ್ತು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು.
ಆ. 15 ರಂದು ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ 17 ರಂದು ಮಡಿಕೇರಿಯ ಜಿಲ್ಲಾ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕೊವೀಡ್ ಮಾರ್ಗ ಸೂಚಿಯಂತೆ ಅಂತ್ಯಕ್ರಿಯೆ ನಡೆಸುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.