ರಾಯಚೂರು: ಕಳೆದ ವರ್ಷ ಕೊಡಗಿನಲ್ಲಿ ಉಂಟಾಗಿದ್ದ ನೆರೆ ಹಾವಳಿಯಿಂದಾಗಿ ಮನೆ-ಮಠ ಕಳೆದುಕೊಂಡ ಸಂತ್ರಸ್ತರಿಗಾಗಿ ರಾಯಚೂರಿನ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಣ ಸಂಗ್ರಹಿಸಿದ್ದರು. ಆದರೆ, ಆ ಹಣ ಸಂತ್ರಸ್ತರಿಗೆ ಸೇರದೇ ಶಾಲೆಯ ಮುಖ್ಯಗುರು ಅವರ ಜೇಬಿಗೆ ಸೇರಿದೆ ಎಂಬ ಆರೋಪ ಕೇಳಿಬರುತ್ತಿದೆ.
ಕಳೆದ ವರ್ಷ ಕೊಡಗು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಲು ಅನೇಕ ದಾನಿಗಳು, ಸಂಘ ಸಂಸ್ಥೆಗಳು ಮುಂದಾಗಿದ್ದರು. ಇವರ ಜೊತೆಯಲ್ಲಿ ಯರಮರಸ್ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಡುತ್ತಾ, ಮನೆ ಮನೆಗೆ ತಿರುಗಿ ನಿಧಿ ಸಂಗ್ರಹ ಮಾಡಿದ್ದರು. ಅಂದಾಜು 50 ಸಾವಿರ ರೂ. ಸಂಗ್ರಹಿಸಿ ಮುಖ್ಯಶಿಕ್ಷಕಿ ಸರಸ್ವತಿ ಅವರ ಕೈಗೆ ನೀಡಿದ್ದಾರೆ. ಆದರೆ ಶಿಕ್ಷಕಿ ಹಣವನ್ನು ಸಂತ್ರಸ್ತರಿಗೆ ನೀಡದೆ ತಾವೇ ಬಳಸಿಕೊಂಡಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದೆ.