ಮೈಸೂರು :ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟ(ಮೈಮುಲ್)ದ ಹೊಸ ನೇಮಕಾತಿಯಲ್ಲಿ 40 ಕೋಟಿಗೂ ಹೆಚ್ಚಿನ ಗೋಲ್‌ಮಾಲ್ ನಡೆದಿದೆ ಎಂದು ಶಾಸಕ ಸಾ ರಾ ಮಹೇಶ್ ಆರೋಪಿಸಿದ್ದಾರೆ.
ಮೈಮುಲ್ ನೇಮಕಾತಿಯಲ್ಲಿ ಗೋಲ್‌ಮಾಲ್.. ಶಾಸಕ ಸಾ ರಾ ಮಹೇಶ್ ಆರೋಪ.. - mymul bribary alligations
ಇದರಲ್ಲಿ ಅಧ್ಯಕ್ಷರು ಸೇರಿ ಹಲವರ ಕೈವಾಡವಿದೆ, ಹಣ ವಹಿವಾಟಿನ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಕ್ಯಾಸೆಟ್ ಇದೆ ಅಂತಾ ಮಾಜಿ ಸಚಿವರು ಬಾಂಬ್ ಸಿಡಿಸಿದ್ದಾರೆ.

ಸಾ.ರಾ. ಮಹೇಶ್ ಸುದ್ದಿಗೋಷ್ಟಿ
ಸಾ.ರಾ. ಮಹೇಶ್ ಸುದ್ದಿಗೋಷ್ಟಿ
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದಲ್ಲಿ 168 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಇಲ್ಲಿ ₹40 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇದರಲ್ಲಿ ಅಧ್ಯಕ್ಷರು ಸೇರಿ ಹಲವರ ಕೈವಾಡವಿದೆ, ಹಣ ವಹಿವಾಟಿನ ಡೀಲ್ ಬಗ್ಗೆ ನನ್ನ ಬಳಿ ಆಡಿಯೋ ಕ್ಯಾಸೆಟ್ ಇದೆ. ಅದನ್ನು ಶೀಘ್ರವಾಗಿ ಬಿಡುಗಡೆ ಮಾಡುವುದಾಗಿ ಮಾಜಿ ಮಂತ್ರಿ ಹಾಗೂ ಶಾಸಕ ಸಾ ರಾ ಮಹೇಶ್ ಆರೋಪಿಸಿದ್ದಾರೆ. ಜೊತೆಗೆ ಡೈರಿಯಲ್ಲಿ ರೈತರಿಗೂ ಮೋಸ ಮಾಡುತ್ತಿದ್ದಾರೆ ಎಂದೂ ಹೇಳಿದ್ದಾರೆ.
Last Updated : May 12, 2020, 5:36 PM IST