ಶಾಸಕ ಜಿ. ಸೋಮಶೇಖರ್ ರೆಡ್ಡಿ ಹುಟ್ಟು ಹಬ್ಬ.. 40 ವೃದ್ಧರಿಗೆ ಉಚಿತ ಬಟ್ಟೆ ವಿತರಣೆ - Bellary district news
ಹುಟ್ಟು ಹಬ್ಬವನ್ನು ಬಳ್ಳಾರಿ ನಗರ ಘಟಕ ಯುವ ಮೋರ್ಚಾ ವತಿಯಿಂದ ಸಂಗನಕಲ್ ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿ ಆಚರಿಸಲಾಯಿತು.
Mla g somashekhar Reddy birthday celebration
ಬಳ್ಳಾರಿ :ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಂಗನಕಲ್ ಗ್ರಾಮದ ಆದರ್ಶ ವೃದ್ಧಾಶ್ರಮದಲ್ಲಿನ 40 ಜನ ವೃದ್ಧರಿಗೆ ಉಚಿತವಾಗಿ ಬಟ್ಟೆಗಳನ್ನು ವಿತರಣೆ ಮಾಡಲಾಯಿತು.
55ನೇ ವರ್ಷಕ್ಕೆ ಕಾಲಿಟ್ಟರುವ ಶಾಸಕ ಜಿ ಸೋಮಶೇಖರ್ ರೆಡ್ಡಿ ಅವರ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ವೃದ್ಧಾಶ್ರಮದ ಹಿರಿಯ ಜೀವಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಬಳ್ಳಾರಿ ನಗರ ಯುವ ಮೋರ್ಚಾ ಘಟಕದ ವತಿಯಿಂದ ಆಚರಿಸಲಾಯಿತು.