ಬೆಂಗಳೂರು: ಕೊರೊನಾ ನಿಯಂತ್ರಣ ಕುರಿತು ಜನರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಿದರೂ ಕೂಡ ಹಲವರು ನಿರ್ಲಕ್ಷ್ಯ ಮಾಡುತ್ತಿರುವ ಪರಿಣಾಮ ಸೋಂಕಿನ ತೀವ್ರತೆ ಕಡಿಮೆಯಾಗಿಲ್ಲ. ಇತ್ತ ಕೆಎಸ್‌ಆರ್‌ಟಿಸಿ ನಿಗಮ ಸಹ ಪ್ರಯಾಣಿಕರಲ್ಲಿ ಸೋಂಕಿನ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
ಬಸ್ ಟಿಕೆಟ್ ಮೂಲಕ ಕೆಎಸ್‌ಆರ್‌ಟಿಸಿ ಕೋವಿಡ್ ಜಾಗೃತಿ - ಬಸ್ ಟಿಕೆಟ್ ಮೂಲಕ ಕೋವಿಡ್ ಜಾಗೃತಿ ಮೂಡಿಸಲು ಮುಂದಾದ ಕೆ ಎಸ್ ಆರ್ ಟಿ ಸಿ
ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ನಿಗಮ ವಿಭಿನ್ನವಾಗಿ ಪ್ರಯಾಣಿಕರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
![ಬಸ್ ಟಿಕೆಟ್ ಮೂಲಕ ಕೆಎಸ್‌ಆರ್‌ಟಿಸಿ ಕೋವಿಡ್ ಜಾಗೃತಿ Bus](https://etvbharatimages.akamaized.net/etvbharat/prod-images/768-512-collagasdadse---copy-2110newsroom-1603253606-40.jpg)
Bus
ಕೆಎಸ್‌ಆರ್‌ಟಿಸಿಯು ಕೊರೊನಾ ಕುರಿತು ಅರಿವು ಮೂಡಿಸಲು ಬಸ್ ಟಿಕೆಟ್‌ಗಳಲ್ಲಿ ಕೋವಿಡ್ ಜಾಗೃತಿ ಸಂದೇಶವನ್ನು ಮುದ್ರಿಸುತ್ತಿದೆ. ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಿ, ಕೈಗಳ ಸ್ವಚ್ಛತೆ ಕಾಪಾಡುವಂತೆ ಬಸ್ ಟಿಕೆಟ್‌ನಲ್ಲಿ ಮುದ್ರಿಸಲಾಗಿದೆ.
ಜೊತೆಗೆ ಆರಂಭಿಕ ಕೋವಿಡ್-19 ಪರೀಕ್ಷೆಯು ಜೀವ ಉಳಿಸುತ್ತದೆ ಎಂದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.