ರಾಯಚೂರು: ಅಕ್ರಮ ಮರಳು ಮಾಫಿಯಾ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮುಂದಾದ ತಹಶೀಲ್ದಾರ್ ನಾಗಪ್ರಶಾಂತ್ ಅವರ ಕಾರ್ಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನಾದ್ಯಂತ ರಾತ್ರಿ ವೇಳೆ ನಡೆಯುತ್ತಿರುವ ಅಕ್ರಮ ಮರಳು ಕಳ್ಳತನದ ವಿರುದ್ಧ ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಾ ಬಂದಿವೆ. ಲಿಂಗಸುಗೂರು, ಮುದಗಲ್ಲ, ರಾಯಚೂರು ಗಡಿ ಭಾಗದ ಕೃಷ್ಣಾ ನದಿಯ ಒಡಲು ಬಗೆದು ರಾಜಸ್ವಧನ ಕಟ್ಟದೆ ಕಳ್ಳತನದಿಂದ ಹೊಸ ಮರಳು ನೀತಿ ಧಿಕ್ಕರಿಸಿ ನಡೆಸುತ್ತಿರುವ ಉದ್ಯಮಕ್ಕೆ ಪೊಲೀಸ್, ಕಂದಾಯ ಇಲಾಖೆ ಪರೋಕ್ಷ ಬೆಂಬಲ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಇದು ವ್ಯಾಪಕ ಟೀಕೆಗೂ ಗುರಿಯಾಗಿತ್ತು.