ಹಾನಗಲ್: ಕೊರೊನಾ ವೈರಸ್ ಹಿನ್ನೆಲೆ ಹಲವು ತಿಂಗಳಿನಿಂದ ಹಾನಗಲ್ ಪಟ್ಟಣದ ಹೊರವಲಯಲ್ಲಿರುವ ಟ್ರೀ ಪಾರ್ಕ್ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಆದರೆ ಇಂದಿನಿಂದ ಪಾರ್ಕ್ ತೆರೆದಿದ್ದು, ಸಾರ್ವಜನಿಕರು ಭೇಟಿ ನೀಡಲು ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ.
ಇಂದಿನಿಂದ ಹಾನಗಲ್ ಟ್ರೀ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ಮುಕ್ತ - ಹಾವೇರಿ ಪ್ರವಾಸಿ ತಾಣಗಳು
ಹಾವೇರಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಟ್ರೀ ಪಾರ್ಕ್ ಅನ್ನು ರಾಷ್ಟ್ರೀಯ ಪ್ರವಾಸ್ಯೋದ್ಯಮ ದಿನವಾದ ಇಂದಿನಿಂದ ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ.

Tree park
ಹಾವೇರಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಟ್ರೀ ಪಾರ್ಕ್ ಅನ್ನು ರಾಷ್ಟ್ರೀಯ ಪ್ರವಾಸ್ಯೋದ್ಯಮ ದಿನವಾದ ಇಂದಿನಿಂದ ಸಾರ್ವಜನಿಕರಿಗೆ ನೋಡಲು ಅವಕಾಶ ಕಲ್ಪಿಸಲಾಗಿದೆ. ಪಾರ್ಕ್ ಪ್ರವೇಶಕ್ಕಿಂತ ಮೊದಲು ಕೊರೊನಾ ತಪಾಸಣೆ ಕಡ್ಡಾಯವಾಗಿರುತ್ತೆ. ದಯವಿಟ್ಟು ವೀಕ್ಷಕರು ಸಹಕರಿಸಬೇಕೆಂದು ಅರಣ್ಯ ಅಧಿಕಾರಿ ಪೇಲನವರ ಮನವಿ ಮಾಡಿದ್ದಾರೆ.
ಕೊರೊನಾ ಮುಂಜಾಗ್ರತಾ ಕ್ರಮಗಳು ಅನುಸರಿಸಬೇಕು. ಪಾರ್ಕ್ ವೀಕ್ಷಣೆಗೆಂದು ಬರುವ ಸಾರ್ವಜನಿಕರು ಕಡ್ಡಾಯವಾಗಿ ಸ್ಯಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರವನ್ನು ಪಾಲಿಸಬೇಕು. ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ಪಾರ್ಕ್ ಒಳಗಡೆ ತರಬಾರದು ಎಂದು ಪೇಲನವರ ತಿಳಿಸಿದರು.