ವಿಜಯನಗರ: ಮದುವೆ ಆರತಕ್ಷತೆ ಸಂದರ್ಭದಲ್ಲೇ ಹೃದಯಾಘಾತದಿಂದ ವರ ಮೃತಪಟ್ಟ ಮನಕಲಕುವ ದುರ್ಘಟನೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಗ್ರಾಮದ ಹೊನ್ನೂರಸ್ವಾಮಿ (26) ಮೃತ ಮದುಮಗ.
ವಿವಾಹ ಆರತಕ್ಷತೆ ಕಾರ್ಯಕ್ರಮದ ವೇಳೆ ವರ ಹೊನ್ನೂರಸ್ವಾಮಿಗೆ ಎದೆ ನೋವು ಕಾಣಿಸಿಕೊಂಡು ದಿಢೀರ್ ಕುಸಿದುಬಿದ್ದು ಅಸ್ವಸ್ಥಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಲೋ ಬಿಪಿ ಇದ್ದುದರಿಂದ ತಕ್ಷಣ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದರು. ಆದರೆ ಮಾರ್ಗಮಧ್ಯೆಯೇ ಹೊನ್ನೂರಸ್ವಾಮಿ ಮೃತಪಟ್ಟಿದ್ದಾರೆ.