ಕರ್ನಾಟಕ

karnataka

ETV Bharat / state

ಬಳ್ಳಾರಿಯ ವಿಮ್ಸ್ ನಲ್ಲಿ ಗಂಗಾವತಿಯ ಸೋಂಕಿತ  ಸಾವು - Karnataka Corona updates

ಆರೋಗ್ಯ ತೊಂದರೆ ಕಾರಣ ಬಳ್ಳಾರಿ ವಿಮ್ಸ್ ಗೆ ದಾಖಲಾಗಿದ್ದ ಗಂಗಾವತಿ ತಾಲೂಕಿನ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಸದ್ಯ ವ್ಯಕ್ತಿಯ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು , ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

Gangavati corona patient died in Bellary vims
Gangavati corona patient died in Bellary vims

By

Published : Jun 29, 2020, 7:06 PM IST

ಗಂಗಾವತಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ರಂಗಾಪುರ ಜಂಗ್ಲಿ ಗ್ರಾಮದ 43 ವರ್ಷದ ವ್ಯಕ್ತಿ ಬಳ್ಳಾರಿ ವಿಮ್ಸ್ ನಲ್ಲಿ ಸಾವನ್ನಪ್ಪಿದ್ದು, ಮರಣಾನಂತರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅನಾರೋಗ್ಯದ ಕಾರಣ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು, ಸದ್ಯ ಅವರ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು ಸೋಂಕು ತಗುಲಿತ್ತು ಎಂದು ಆರೋಗ್ಯ ಸಿಬ್ಬಂದ ದೃಢಪಡಿಸಿದ್ದಾರೆ.

ಸದ್ಯ ವ್ಯಕ್ತಿಯನ್ನು ಬಳ್ಳಾರಿಗೆ ಸಾಗಿಸಲು ಬಳಸಲಾಗಿದ್ದ ವಾಹನ, ಚಾಲಕ ಸೇರಿದಂತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆಹಾಕುವ ಕಾರ್ಯ ನಡೆದಿದೆ. ಗ್ರಾಮಕ್ಕೆ ಭೇಟಿ ನೀಡಿದ ಕಂದಾಯ, ಆರೋಗ್ಯ ಹಾಗೂ ಪಂಚಾಯತ್ ಸಿಬ್ಬಂದಿ ಗ್ರಾಮವನ್ನು ಸೀಲ್ ಡೌನ್ ಮಾಡಿದ್ದಾರೆ.

ABOUT THE AUTHOR

...view details