ಮಕ್ಕಳಿಗಾಗಿ ಉಚಿತ ಟೆಲಿ ಕೌನ್ಸೆಲಿಂಗ್: 14499 ಸಹಾಯವಾಣಿ ಆರಂಭ - ಕೊರೊನಾ ಮಕ್ಕಳು ಸಹಾಯವಾಣಿ ಸಂಖ್ಯೆ
ಓದು, ಭವಿಷ್ಯ, ಕೋವಿಡ್ ಆತಂಕ ಹೀಗೆ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಆಪ್ತ ಸಮಾಲೋಚನೆಗೆ ರಾಜ್ಯದ ಎಲ್ಲ ಮಕ್ಕಳು ಹಾಗೂ ಪೋಷಕರು ಮಕ್ಕಳಿಗಾಗಿ 14499 ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದು.
ಬೆಂಗಳೂರು:ರಾಜ್ಯದಲ್ಲಿ ಕೋವಿಡ್-19 ಎರಡನೇ ಅಲೆಯ ಹಿನ್ನೆಲೆ ಆಪ್ತ ಸಮಾಲೋಚನೆಗಾಗಿ ಅಗತ್ಯವಿರುವ ಎಲ್ಲ ಮಕ್ಕಳಿಗಾಗಿ ಉಚಿತ ಟೆಲಿ ಕೌನ್ಸ್ ಲಿಂಗ್ ಸೌಲಭ್ಯ ನೀಡಲು ಟೋಲ್ ಫ್ರೀ ಸಂಖ್ಯೆ 14499 ಆರಂಭಿಸಲಾಗಿದೆ.
ಓದು, ಭವಿಷ್ಯ, ಕೋವಿಡ್ ಆತಂಕ ಹೀಗೆ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಆಪ್ತ ಸಮಾಲೋಚನೆಗೆ ರಾಜ್ಯದ ಎಲ್ಲ ಮಕ್ಕಳು ಹಾಗೂ ಪೋಷಕರು ಮಕ್ಕಳಿಗಾಗಿ 14499 ಸಂಖ್ಯೆಗೆ ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆ ಸೌಲಭ್ಯ ಪಡೆಯಬಹುದು.
ಅಲ್ಲದೇ ರಾಷ್ಟ್ರಾದ್ಯಂತ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ ಸೇವೆ 1098 ಸಂಕಷ್ಟದಲ್ಲಿ ಸಿಲುಕಿರುವ ರಕ್ಷಣೆ ಮತ್ತು ಪೋಷಣೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆ ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಸಿಗಲಿದೆ ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ತಿಳಿಸಲಾಗಿದೆ.