ಕರ್ನಾಟಕ

karnataka

ETV Bharat / state

ಮೋದಿ ನಾಟಕ ಕಂಪನಿ ಲೀಡರ್: ಮಾಜಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯ - former minister shivaraj tangadagi

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಶಿವರಾಜ ತಂಗಡಗಿ
ಶಿವರಾಜ ತಂಗಡಗಿ

By

Published : Aug 7, 2022, 5:44 PM IST

ಕೊಪ್ಪಳ:ಹರ್ ಘರ್ ತಿರಂಗಾ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಎಂಬ ನಾಟಕ ಕಂಪನಿಗೆ ಮೋದಿನೇ ಲೀಡರ್ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ.

75ನೇ ಅಮೃತ ಮಹೋತ್ಸವದ ಸ್ವಾತಂತ್ರೋತ್ಸವ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಅವರದೇ ಪಕ್ಷದ ಕೆ. ಎಸ್. ಈಶ್ವರಪ್ಪ ಭಗವಾಧ್ವಜ ಹಾರಿಸುವುದಾಗಿ ಹೇಳಿದ್ದರು. ಆದರೆ, ಇವರು ಘರ್ ಘರ್ ತಿರಂಗಾ ಅಂತ ಹೇಳುತ್ತಿದ್ದಾರೆ. ಬೇರೆಯವರ ಮನೆ ಮೇಲೆ ಧ್ವಜ ಹಾರಿಸುವ ಮೊದಲು ತಮ್ಮ ಆರ್​ಎಸ್​ಎಸ್​ ಕಚೇರಿಯ ಮೇಲೆ ಹಾರಿಸಲಿ ಎಂದು ಸವಾಲು ಹಾಕಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿದರು

ನಮ್ಮ ದೇಶದ ಹೆಮ್ಮೆಯ ಸಂಕೇತ ಈ ರಾಷ್ಟ್ರಧ್ವಜ. ಅದರಲ್ಲಿರುವ ಅಶೋಕ ಚಕ್ರ ಅದನ್ನ ಹಾರಿಸಲಿಕ್ಕೆ ಅದರದೇ ಆದ ನಿಯಮಗಳಿವೆ. ಆದರೆ, ಬಿಜೆಪಿಗರು ಹರ್ ಘರ್ ಎಂದು ಹೇಳಿ ಎಲ್ಲೆಂದರಲ್ಲಿ ಹಾರಿಸಿ ನಿಯಮ ಪಾಲನೆ ಮಾಡದೆ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿಸಲು ಹೊರಟಿದ್ದಾರೆ ಎಂದು ಹೇಳಿದರು.

ರಾಷ್ಟ್ರಲಾಂಚನದ ಸಿಂಹಗಳಲ್ಲ: ನೂತನ ಸಂಸತ್​ ಭವನದ ಮೇಲೆ ಸಿಂಹಗಳನ್ನು ಸ್ಥಾಪಿಸಿದ್ದಾರೆ. ಅವು ನಮ್ಮ ರಾಷ್ಟ್ರಲಾಂಚನದ ಸಿಂಹಗಳಲ್ಲ. ಅವು 40 ಪರ್ಸೆಂಟ್ ಕಮಿಷನ್ ಹಣಕ್ಕಾಗಿ ಬಾಯಿ ತೆರೆದಿರುವ ನಾಲ್ಕು ಗುಜರಾತಿ ಸಿಂಹಗಳು ಎಂದು ತಂಗಡಗಿ ಲೇವಡಿ ಮಾಡಿದರು.

ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಮಾತನಾಡಿದರು

ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದಿಂದ ಬಿಜೆಪಿಯಲ್ಲಿ ನಡುಕ ಉಂಟಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನ ಪಡೆಯಲಿದೆ. ಕೊಪ್ಪಳ ಜಿಲ್ಲೆಯಲ್ಲಿನ ಐದೂ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದು ಭವಿಷ್ಯ ನುಡಿದರು.

ತಿನ್ನುವ ಆಹಾರಕ್ಕೆ ಟ್ಯಾಕ್ಸ್ : ಬಿಜೆಪಿಗರ ಆಟ ಜನರಿಗೆ ಗೊತ್ತಾಗಿದೆ. ಹಿಂದೂ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ಮಾಡಿ ಅವರ ಮಧ್ಯೆ ಜಗಳ ಹಚ್ಚುವ ಸಿನಿಮಾಗಳಿಗೆ ಬಿಜೆಪಿ ಸರ್ಕಾರ ಟ್ಯಾಕ್ಸ್ ಫ್ರಿ ಮಾಡಿದ್ದಾರೆ. ಇನ್ನೊಂದೆಡೆ ಬಡವರು ತಿನ್ನುವ ಆಹಾರಕ್ಕೆ ಟ್ಯಾಕ್ಸ್ ಹಾಕುತ್ತಿದ್ದಾರೆ. ಇದು ಈ ದೇಶದ ಜನರ ದುರಂತ ಎಂದು ಮಾಜಿ ಸಚಿವರು ಹರಿಹಾಯ್ದರು.

ಓದಿ:ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆ ಕೇವಲ ಗಾಸಿಪ್​: ಕೆ. ಪಿ ನಂಜುಂಡಿ

ABOUT THE AUTHOR

...view details