ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಗಾಂಜಾ ಚಾಕಲೇಟ್ ಜಪ್ತಿ! - First time marijuana chocolate confiscation in Bangalore

ಬೆಂಗಳೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಮೊದಲ ಬಾರಿಗೆ ಕಾಲೇಜ್‌ ವಿದ್ಯಾರ್ಥಿಗಳು, ಯುವಕ-ಯುವತಿಯರಿಗೆ ಮಾರಾಟ ಮಾಡುತ್ತಿದ್ದ ಗಾಂಜಾ ಚಾಕಲೇಟ್ ವಶಪಡಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ.

Marijuana
Marijuana

By

Published : Oct 16, 2020, 9:56 AM IST

ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ಬೆಳಕಿಗೆ ಬರುತ್ತಿದ್ದ ಹಾಗೆ ಸಿಲಿಕಾನ್ ಸಿಟಿಯ ಪೊಲೀಸರು ಅಲರ್ಟ್ ಆಗಿದ್ದು, ಇದೇ ಮೊದಲ ಬಾರಿಗೆ ಗಾಂಜಾ ಚಾಕಲೇಟ್ ಅನ್ನು ವಶಪಡಿಸಿಕೊಂಡಿದ್ದಾರೆ.

ಡ್ರಗ್ಸ್ ಬುಡಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳು ಕೈ ಹಾಕಿದ್ದು, ಕಾಲೇಜು‌ ವಿದ್ಯಾರ್ಥಿಗಳು, ಯುವಕ- ಯುವತಿಯರಿಗೆ ಮಾರಾಟ ಮಾಡುತ್ತಿದ್ದ ಗಾಂಜಾ ಚಾಕಲೇಟ್ ಜಪ್ತಿ ಮಾಡಿಕೊಂಡಿದ್ದಾರೆ. ಮಕ್ಕಳು ತಿನ್ನೋ ಚಾಕಲೇಟ್​ ರೀತಿಯಲ್ಲಿ ಈ ಗಾಂಜಾ ಪ್ಯಾಕೆಟ್ ಇದ್ದು, ಇದು ಉತ್ತರಪ್ರದೇಶದಿಂದ ಬೆಂಗಳೂರಿಗೆ ಸಪ್ಲೈ ಆಗುತ್ತಿತ್ತು. ಜೊತೆಗೆ‌ ಸುಬ್ರಮಣ್ಯನಗರದ ಬೀಡಾ ಅಂಗಡಿಯಲ್ಲಿ ಈ ಚಾಕಲೇಟ್ ಅನ್ನು 50 ರೂ.ಗೆ ಒಂದರಂತೆ ರಾಜರೋಷವಾಗಿ ಮಾರಾಟ ಮಾಡ್ತಿದ್ದರು ಎಂಬ ಮಾಹಿತಿ ದೊರೆತಿದೆ.

ಗಾಂಜಾ ಚಾಕಲೇಟ್ ಮಾಹಿತಿ ಮೇರೆಗೆ ಉತ್ತರ ವಿಭಾಗದ ಜಂಟಿ ಆಯುಕ್ತ ನಾಗರಾಜಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಅಂಗಡಿ ಮಾಲೀಕ ಗುಲಾಬ್ ಯಾದವ್ ಎಸ್ಕೇಪ್ ಆಗಿದ್ದಾನೆ. 20 ಸಾವಿರ ರೂ. ಮೌಲ್ಯದ 2.2 ಕೆ.ಜಿ ಗಾಂಜಾ ಚಾಕಲೇಟ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ‌ ಇದೇ ಮೊದಲ ಬಾರಿಗೆ ಈ ರೀತಿಯ ಚಾಕಲೇಟ್ ಗಾಂಜಾ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯ ಹಿನ್ನೆಲೆ, ಡ್ರಗ್ಸ್ ಸರಬರಾಜು ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.

ABOUT THE AUTHOR

...view details