ಕರ್ನಾಟಕ

karnataka

ETV Bharat / state

ಮನುಕುಲಕ್ಕೆ ಪರಿಸರ ಅವಶ್ಯ, ಅದರ ರಕ್ಷಣಾಭಾರ ನಮ್ಮದು: ಶಾಸಕ ಡಾ.ಶಿವರಾಜ್ ಪಾಟೀಲ್ - World Environment Day

ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ವಿವಿಧ ಸಸ್ಯಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.

Environment day celebration in gadag
Environment day celebration in gadag

By

Published : Jun 5, 2020, 12:59 PM IST

Updated : Jun 5, 2020, 2:43 PM IST

ರಾಯಚೂರು :ನಗರದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ವಿಶ್ವಪರಿಸರ ದಿನವನ್ನ ಆಚರಣೆ ಮಾಡಿದರು.

ನಗರದ ಬಸವೇಶ್ವರ ಕಾಲೊನಿಯಲ್ಲಿ ಬಿಲ್ವಪತ್ರಿ, ಬನ್ನಿ ಗಿಡ, ಸೇರಿದಂತೆ ನಾನಾ ಮಾದರಿ ಸಸ್ಯಗಳನ್ನು ನೆಟ್ಟು, ನೀರು ಹಾಕುವ ಮೂಲಕ ಪರಿಸರ ದಿನ ‌ಆಚರಿಸಲಾಯಿತು. ಈ ವೇಳೆ, ಪರಿಸರ ರಕ್ಷಣೆಗೆ ಗಿಡ - ಮರಗಳ ಬೆಳೆಸುವ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು.

ಮನುಷ್ಯ ಆರೋಗ್ಯವಾಗಿರಲು‌ ಮನುಕುಲಕ್ಕೆ ಪರಿಸರದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಸ್ಯಗಳನ್ನು ನೆಡುವ ಮೂಲಕ ಪರಿಸರ ಉಳಿಸಿ ಬೆಳಸಬೇಕಾಗಿದ್ದು, ನಮ್ಮ ಕರ್ತವ್ಯ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನ ಮಾಡಬೇಕು ಎಂದು ಶಾಸಕರು ತಿಳಿಸಿದರು.

ಇದೇ ವೇಳೆ, ಗ್ರೀನ್ ರಾಯಚೂರು ಯೋಜನೆಯಡಿ ಸಸಿಗಳಿಗೆ ನೀರು ಪೂರೈಸಲು ಶಾಸಕರು ವಾಟರ್ ಟ್ಯಾಂಕರ್ ನೀಡಿದರು.

Last Updated : Jun 5, 2020, 2:43 PM IST

ABOUT THE AUTHOR

...view details