ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂಟು ಮಂದಿಗೆ ಕೊರೊನಾ ದೃಢಪಟ್ಟಿದ್ದು, ಆರು ಮಂದಿ ಗುಣಮುಖರಾಗಿದ್ದಾರೆ.
8 ಜನ ಸೋಂಕಿತರ ಪೈಕಿ ನಾಲ್ಕು ಮಂದಿ ರೋಗಿ-8318 ಪ್ರಾಥಮಿಕ ಸಂಪರ್ಕವುಳ್ಳವರಾಗಿದ್ದು, ಇಬ್ಬರು ತೀವ್ರ ಉಸಿರಾಟದ ತೊಂದರೆ, ಒಬ್ಬರು ಐಎಲ್ಐ ಮತ್ತು ಒಬ್ಬರು ಕುವೈತ್‌ನಿಂದ ಬಂದವರಾಗಿದ್ದಾರೆ. ಎಂಟು ಮಂದಿಯಲ್ಲಿ ನಾಲ್ಕು ಮಹಿಳೆಯರು ನಾಲ್ಕು ಪುರುಷರಿದ್ದಾರೆ.
ದ.ಕ ಜಿಲ್ಲೆಯಲ್ಲಿ 8 ಮಂದಿಗೆ ಕೊರೊನಾ.. ಹೆರಿಗೆಯಾದ ಮಹಿಳೆ ಸೇರಿ 6 ಮಂದಿ ಗುಣಮುಖ - Corona virus updates
ಹೆರಿಗೆಯಾದ ಮಹಿಳೆಯೂ ಸೇರಿ 6 ಜನ ಗುಣಮುಖರಾಗಿದ್ದಾರೆ. 28 ವರ್ಷದ ಗರ್ಭಿಣಿ ಮಹಿಳೆಗೆ ಇತ್ತೀಚೆಗೆ ಸಿಸೇರಿಯನ್ ಮೂಲಕ ಹೆರಿಗೆಯಾಗಿತ್ತು. ಬಳಿಕ ಬಂದ ಗಂಟಲು ದ್ರವದ ಪರೀಕ್ಷೆಯಲ್ಲಿ ವರದಿ ನೆಗೆಟಿವ್ ಬಂದಿದೆ..
Eight corona cases found in dakshinakannada district
ದ.ಕ ಜಿಲ್ಲೆಯಲ್ಲಿ ಈವರೆಗೆ 453 ಪ್ರಕರಣ ಪತ್ತೆಯಾಗಿವೆ. 256 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 9 ಮಂದಿ ಸಾವನ್ನಪ್ಪಿದ್ದು, 188 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 286 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
Last Updated : Jun 23, 2020, 9:43 PM IST