ವಿಜಯಪುರ:ಯುನೆಸ್ಕೋ ಜೀವ ವಿಜ್ಞಾನ ಪೀಠದ ಮುಖ್ಯಸ್ಥರಾಗಿ ಬಿಎಲ್ ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕುಶಾಲ ದಾಸ್ ನೇಮಕವಾಗಿದ್ದಾರೆ.
ಈ ಜೀವ ವಿಜ್ಞಾನ ಪೀಠ ಅಮೆರಿಕ, ಇಂಗ್ಲೆಂಡ್ ಸೇರಿದಂತೆ 18 ದೇಶಗಳ ವಿವಿಧ ವಿವಿ ಗಳಿಗೆ ಸ್ನಾತಕೋತ್ತರ ಮತ್ತು ಪಿಹೆಚ್ ಡಿ ಪಠ್ಯಕ್ರಮವನ್ನು ಸಿದ್ಧಪಡಿಸುವುದು ಸೇರಿದಂತೆ ಜೀವ ವಿಜ್ಞಾನ ಕ್ಷೇತ್ರದಲ್ಲಿ ಯುನೆಸ್ಕೋ ಕೈಗೊಳ್ಳಬೇಕಾದ ಹಲವು ಕ್ರಮಗಳನ್ನು ನೋಡಿಕೊಳ್ಳಲಿದೆ.