ಕರ್ನಾಟಕ

karnataka

ETV Bharat / state

ಪೊಲೀಸ್ ಇಲಾಖೆ ಜಾಗ ಅತಿಕ್ರಮಣ; ಸರ್ವೆ ಮಾಡಿಸಿದ ಎಸ್​ಪಿ ವರ್ತಿಕಾ ಕಟಿಯಾರ್ - Dharwad police department

ಮುಗದ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹೊಂದಿದ್ದ ಒಂದು ಎಕರೆ ಜಾಗದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸರ್ವೆ ಮಾಡಿಸಲು ಮುಂದಾಗಿದ್ದಾರೆ.

Dharwad SP started survey work on muguda polices land
Dharwad SP started survey work on muguda polices land

By

Published : Jun 26, 2020, 9:11 PM IST

ಧಾರವಾಡ: ತಾಲೂಕಿನ ಮುಗದ ಗ್ರಾಮದಲ್ಲಿ ಪೊಲೀಸ್ ಇಲಾಖೆ ಹೊಂದಿದ್ದ ಒಂದು ಎಕರೆ ಜಾಗದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಸರ್ವೆ ಮಾಡಿಸುವ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

1970 ರ ದಶಕದಲ್ಲಿ ಈ ಗ್ರಾಮದಲ್ಲಿ ಒಂದು ಪೊಲೀಸ್ ಠಾಣೆ ಇತ್ತು. ಪಿಎಸ್ಐ ಸೇರಿದಂತೆ 12 ಜನ ಪೊಲೀಸ್ ಸಿಬ್ಬಂದಿ ಕ್ವಾರ್ಟರ್ಸ್​ನಲ್ಲಿ ವಾಸ ಮಾಡುತ್ತಿದ್ದರು.

ಆದರೆ ಈಗ ಆ 1 ಎಕರೆ ಜಾಗ ಕಳೆದ 15 ವರ್ಷಗಳಲ್ಲಿ ಸಾಕಷ್ಟು ಅತಿಕ್ರಮವಾಗಿದೆ. ಪೊಲೀಸ್ ಇಲಾಖೆಗೆ ಸೇರಿದ ಆ ಜಾಗದಲ್ಲಿ ಅನೇಕರು ಮನೆಗಳನ್ನು ನಿರ್ಮಿಸಿಕೊಂಡಿದ್ದು, ಆ ಜಾಗದ ಕುರಿತು ಸರ್ವೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಎಸ್ಪಿ ಕಟಿಯಾರ್ ತಿಳಿಸಿದರು.

ಅತಿಕ್ರಮಣ ಜಾಗೆಯಲ್ಲಿ ಪಂಚಾಯತಿ ವತಿಯಿಂದ ಮನೆ ನಿರ್ಮಿಸಿಕೊಂಡಿದ್ದಾರೆ. ಅವರ ಮನೆಗಳನ್ನು ತೆರವುಗೊಳಿಸಿದರೆ ಸಮಸ್ಯೆಯಾಗುತ್ತದೆ. ಆ ಜಾಗದ ಪಕ್ಕದಲ್ಲೇ ಇನ್ನೊಂದು ಎಕರೆ ಜಾಗವಿದ್ದು, ಅದನ್ನೇ ಪೊಲೀಸ್ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ABOUT THE AUTHOR

...view details