ಮೈಸೂರು: ವೀರಪ್ಪನ್ ಸಹಚರ, ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಬಿಲ್ವೇಂದ್ರನ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಾಡುಗಳ್ಳ ವೀರಪ್ಪನ್ ಸಹಚರ ಬಿಲ್ವೇಂದ್ರನ್ ಸಾವು - ಬಿಲ್ವೇಂದ್ರನ್ ಡೆತ್ ನ್ಯೂಸ್
ಕಾಡುಗಳ್ಳ ವೀರಪ್ಪನ್ ಸಹಚರನಾಗಿ ಗಲ್ಲು ಶಿಕ್ಷೆಯಿಂದ ಪಾರಾಗಿ, ಕಳೆದ 27 ವರ್ಷಗಳಿಂದ ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಬಿಲ್ವೇಂದ್ರನ್ ಮೃತಪಟ್ಟಿದ್ದಾರೆ.
ಬಿಲ್ವೇಂದ್ರನ್
ಕಾಡುಗಳ್ಳ ವೀರಪ್ಪನ್ ಸಹಚರನಾಗಿ ಗಲ್ಲು ಶಿಕ್ಷೆಯಿಂದ ಪಾರಾಗಿ, ಕಳೆದ 27 ವರ್ಷಗಳಿಂದ ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾರ್ಟಹಳ್ಳಿಯ ಬಿಲ್ವೇಂದ್ರನ್ (70), ಕಳೆದ 5 ದಿನಗಳ ಹಿಂದೆ ಮೈಸೂರು ಜೈಲಿನ ಕೊಠಡಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಮೃತದೇಹವನ್ನು ಶವಗಾರದಲ್ಲಿ ಇಡಲಾಗಿದೆ.