ಕರ್ನಾಟಕ

karnataka

ETV Bharat / state

ಈಜುಕೊಳದಲ್ಲಿ ಆಕಸ್ಮಿಕವಾಗಿ ಮುಳುಗಿ ದುಬೈನಲ್ಲಿ ಭಟ್ಕಳ ಮೂಲದ ಬಾಲಕ ಸಾವು - Death of a boy in Dubai latest news

ಈಜುಕೊಳದಲ್ಲಿ ಆಕಸ್ಮಿಕವಾಗಿ ಬಿದ್ದು ಭಟ್ಕಳ ಮೂಲದ ಮಗುವೊಂದು ದುಬೈನಲ್ಲಿ ಮೃತಪಟ್ಟಿದೆ.

ಮೃತ ಬಾಲಕ

By

Published : Oct 20, 2019, 9:28 AM IST

Updated : Oct 20, 2019, 10:01 AM IST

ಭಟ್ಕಳ: ಭಟ್ಕಳ ಮೂಲದ ದುಬೈ ನಿವಾಸಿ ಬಾಲಕನೋರ್ವ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ಮುಹಮ್ಮದ್ ಶಾಬಂದ್ರಿ ಬಿನ್ ಮಹಮ್ಮದ್ ಆಸೀಮ್ ಶಾಬಂದ್ರಿ(5) ಎಂದು ಗುರುತಿಸಲಾಗಿದೆ. ಶುಕ್ರವಾರ ದುಬೈ ಸಮಯ ಸಂಜೆ 5.30ಕ್ಕೆ ಅಲ್‍ ಗರೀರ್ ಕಟ್ಟಡದ ಮೂರನೇ ಅಂತಸ್ತಿನಲ್ಲಿರುವ ಮಕ್ಕಳ ಈಜುಕೊಳದಲ್ಲಿ ಇತರ ಮಕ್ಕಳೊಂದಿಗೆ ಈ ಮಗು ಈಜುತ್ತಿತ್ತು ಎನ್ನಲಾಗಿದ್ದು, ಪಕ್ಕದಲ್ಲಿ ಹಿರಿಯರ ಈಜುಕೊಳ ಇದೆ. ಅಲ್ಲಿ ಐದಾರು ಮಂದಿ ಯುವಕರು ಈಜುತ್ತಿದ್ದರು ಎಂದು ಹೇಳಲಾಗಿದೆ.

ಆದರೆ ಅಕಸ್ಮಿಕವಾಗಿ ಮಗು ಹಿರಿಯರ ಕೊಳದಲ್ಲಿ ಬಂದು ಸೇರಿಕೊಂಡಿರುವುದು ಯಾರ ಗಮನಕ್ಕೂ ಬಾರದೆ ಇರುವುದರಿಂದ ಈ ದುರಂತ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಾಲಕ ಹಿರಿಯರ ಈಜುಕೊಳದಲ್ಲಿ ಮುಳುಗುತ್ತಿರುವಾಗ ಆತನನ್ನು ರಕ್ಷಿಸಿ ಪೊಲೀಸರ ಸಹಾಯದಿಂದ ಸಮೀಪದ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಬಾಲಕ ಮೃತಪಟ್ಟಿರುವುದಾಗಿ ಬಾಲಕನ ಕುಟುಂಬದ ಮೂಲಗಳು ತಿಳಿಸಿವೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಭಟ್ಕಳ ದುಬೈ ಜಮಾತಿನ ಮಾಜಿ ಪ್ರಧಾನ ಕಾರ್ಯದರ್ಶಿ ಜೈಲಾನಿ ಶಾಬಂದ್ರಿ, ಸರ್ಫರಾ ಝ್‍ಜುಕಾಕೋ, ಆಫಾಖ್ ನಾಯ್ತೆ, ಇಮ್ರಾನ್‍ ಖತೀಬ್ ಭಟ್ಕಳ ದುಬೈ ಜಮಾತ್ ಸದಸ್ಯರು ಆಸ್ಪತ್ರೆಗೆ ತೆರಳಿ ಬಾಲಕನ ಮೃತದೇಹ ಪಡೆಯಲು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಬಾಲಕ ಮುಹಮ್ಮದ್ ಶಾಬಂದ್ರಿ ದುಬೈನ ಸೆಂಟ್ರಲ್ ಸ್ಕೂಲ್​ನಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದ್ದು, ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ದುಬೈ ಮತ್ತು ಯುಎಇನಲ್ಲಿ ವಾಸಿಸುತ್ತಿರುವ ಭಟ್ಕಳ ಸಮುದಾಯದವರು ಬಾಲಕನ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ.

Last Updated : Oct 20, 2019, 10:01 AM IST

ABOUT THE AUTHOR

...view details