ಬೀದರ್: ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ ಡೌನ್ ಮಾಡಿ ಸಾರ್ವಜನಿಕ ಸಂಪರ್ಕಕ್ಕೆ ನಿರ್ಬಂಧ ಹೆರಲಾಗಿದೆ.
ಜಿಲ್ಲೆಯ ಔರಾದ್ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಗೆ ಕೊರೊನಾ ಸೋಂಕು ದೃಢಪಡುತ್ತಿದ್ದಂತೆ ಠಾಣೆಯ ಮುಖ್ಯದ್ವಾರ ಬಂದ್ ಮಾಡುವ ಮೂಲಕ ಸಾರ್ವಜನಿಕ ಸಂಪರ್ಕಕ್ಕೆ ಬ್ರೇಕ್ ಹಾಕಲಾಗಿದೆ. ಠಾಣೆಗೆ ಸಂಪೂರ್ಣ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದ್ದು, ಸಿಬ್ಬಂದಿಯ ಸಂಪರ್ಕಕ್ಕೆ ಬಂದವರ ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಕಾನ್ಸ್ ಸ್ಟೇಬಲ್ ಗೆ ಕೊರೊನಾ: ಔರಾದ್ ಪೊಲೀಸ್ ಠಾಣೆ ಸೀಲ್ ಡೌನ್ - Bidar Corona latest news
ಬೀದರ್ ನ ಔರಾದ್ ಪೊಲೀಸ್ ಠಾಣೆಯ ಕಾನ್ಸ್ ಸ್ಟೇಬಲ್ ಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಠಾಣೆಯನ್ನು ಸೀಲ್ ಡೌನ್ ಮಾಡಿ ಸಾರ್ವಜನಿಕ ಸಂಪರ್ಕಕ್ಕೆ ನಿರ್ಬಂಧ ಹೆರಲಾಗಿದೆ.

Bidar police station
ಪೊಲೀಸರಿಗೆ ಸೋಂಕು ತಗುಲುತ್ತಿದ್ದು, ಔರಾದ್ ಪೊಲೀಸ್ ಠಾಣೆ ಮೂರನೇ ಠಾಣೆಯಾಗಿದ್ದು, ಹಿರಿಯ ಅಧಿಕಾರಿಗಳು ಪಿಎಸ್ ಐ ಹಾಗೂ ಕಾನ್ಸ್ ಸ್ಟೇಬಲ್ ಗಳಿಗೂ ಸೋಂಕು ತಗುಲಿದೆ.