ಕರ್ನಾಟಕ

karnataka

ETV Bharat / state

ಘೋಷಣೆ ಕೂಗುತ್ತಲೇ ಜಿದ್ದಾಜಿದ್ದಿಗಿಳಿದ ಕೈ-ಕಮಲ ಕಾರ್ಯಕರ್ತರು! - undefined

ಅಭ್ಯರ್ಥಿಗಳ ಪರ ಘೋಷಣೆ ಕೂಗುತ್ತಲೇ ಕಾಂಗ್ರೆಸ್​ ಹಾಗೂ ಬಿಜೆಪಿ ಕಾರ್ಯಕರ್ತರು ಜಿದ್ದಾಜಿದ್ದಿಗಿಳಿದ ಘಟನೆ ಬೀದರ್​​ನಲ್ಲಿ ನಡೆದಿದೆ

ಕೈ-ಕಮಲ ಕಾರ್ಯಕರ್ತರ ಘೋಷಣಾ ಸಮರ

By

Published : Apr 16, 2019, 1:49 PM IST

ಬೀದರ್: ಲೋಕಸಭೆ ಮತದಾನ ದಿನ ಹತ್ತಿರವಾಗ್ತಿದ್ದಂತೆ ಜಿಲ್ಲೆಯಲ್ಲಿ ಘೋಷಣೆಗಳ ಸಮರ ತಾರಕಕ್ಕೇರಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿಗರು ಘೋಷಣೆಗಳನ್ನು ಕೂಗುತ್ತಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದಾರೆ.

ಕೈ-ಕಮಲ ಕಾರ್ಯಕರ್ತರ ಘೋಷಣಾ ಸಮರ

ಬೀದರ್​ ತಾಲೂಕಿನ ಕಮಠಾಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಬೆಂಬಲಿಗರು ಮೊದಿ..ಮೋದಿ.. ಎಂದು ಕೂಗುತ್ತಾ ಪ್ರಚಾರ ಮಾಡುತ್ತಿದ್ದರು. ಎರಡೂ ಪಕ್ಷಗಳ ಬೆಂಬಲಿಗರು ಒಂದೇ ರಸ್ತೆಯಲ್ಲಿ ಸಾಗುವಾಗ ಜೋರಾಗಿ ಕೂಗಲಾರಂಭಿಸಿದರು. ಹೀಗೆ ಕೂಗಾಡುತ್ತಾ ಎಲ್ಲಿ ಎರಡೂ ಕಡೆಯವರು ಏನಾದರೂ ಅನಾಹುತ ಮಾಡಿಬಿಡುತ್ತಾರೋ ಎಂದು ಗ್ರಾಮಸ್ಥರು ಆತಂಕಕ್ಕೀಡಾದರು.

ಎರಡು ದಿನಗಳ ಹಿಂದೆ ಸಹ ಕೈ ಅಭ್ಯರ್ಥಿ ಈಶ್ವರ ಖಂಡ್ರೆ ಪತ್ನಿ ಗೀತಾ ಖಂಡ್ರೆ ಹಾಗೂ ಮಾಜಿ ಶಾಸಕ ಅಶೋಕ ಖೇಣಿ ಅವರಿಗೆ ಬಿಜೆಪಿ ಬೆಂಬಲಿಗರು ಮೋದಿ ಮೋದಿ ಎಂದು ಘೋಷಣೆ ಹಾಕುವ ಮೂಲಕ ಘೇರಾವ್ ಹಾಕಿದ್ದರು. ಇದೀಗ ಕಾಂಗ್ರೆಸ್ ಕಾರ್ಯಕರ್ತರು ಖಂಡ್ರೆಗೆ ಜೈಕಾರ ಕೂಗುತ್ತಾ, ಅಬ್ಬರದ ಪ್ರಚಾರ ನಡೆಸುತ್ತಿರುವುದರಿಂದ ಚುನಾವಣಾ ಕಣ ರಣಕಣವಾಗಿ ಮಾರ್ಪಟ್ಟಿದೆ.

For All Latest Updates

TAGGED:

ABOUT THE AUTHOR

...view details