ಕರ್ನಾಟಕ

karnataka

ETV Bharat / state

ಜಿಎಸ್​ಟಿ ಅಧಿಕಾರಿಗಳ ಹೆಸರಲ್ಲಿ ಹಣಕ್ಕೆ ಬೇಡಿಕೆ: ಇಬ್ಬರ ಬಂಧನ, ಓರ್ವ ಪರಾರಿ - ಮ್ ಫ್ಲೈ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಅಕಾಡೆಮಿ

ಜಿಎಸ್​ಟಿ ಅಧಿಕಾರಿಗಳೆಂದು ಬ್ಲಾಕ್​ಮೇಲ್ ಮಾಡಿ ಅಕಾಡೆಮಿ ಸಿಬ್ಬಂದಿಗೆ ಹಣದ ಬೇಡಿಕೆ ಇಟ್ಟಿದ್ದ ಮೂವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ಜೆಎಸ್​ಟಿ ಅಧಿಕಾರಿಗಳ ಹೆಸರಲ್ಲಿ ವಂಚನೆ

By

Published : Oct 2, 2019, 10:54 PM IST

ಬೆಳಗಾವಿ: ಜಿಎಸ್​ಟಿ ಅಧಿಕಾರಿಗಳೆಂದು ಬ್ಲಾಕ್​​ಮೇಲ್ ಮಾಡಿ ಅಕಾಡೆಮಿ ಸಿಬ್ಬಂದಿಗೆ ಹಣದ ಬೇಡಿಕೆ ಇಟ್ಟಿದ್ದ ಮೂವರ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ನಗರದ ನಿವಾಸಿಗಳಾದ ಅಶೋಕ ಪರಶುರಾಮ ಸಾವಂತ, ಜಯವಂತ ಬಾಡಿವಾಲೆ ಬಂಧಿತರು. ಮಹೇಶ ಪಾಟೀಲ ಎಂಬಾತ ಪರಾರಿಯಾಗಿದ್ದಾನೆ.

ನಗರದ ಬಸವೇಶ್ವರ ವೃತ್ತದಲ್ಲಿರುವ ಡ್ರೀಮ್ ಫ್ಲೈ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಅಕಾಡೆಮಿಗೆ ಹೋಗಿರುವ ಈ ಮೂವರು ತಾವು ಜಿಎಸ್‍ಟಿ ಅಧಿಕಾರಿಗಳು ಎಂದು ನಂಬಿಸಿದ್ದಾರೆ. ತಾವು ಜಿಎಸ್​ಟಿ ತುಂಬಿಲ್ಲ, ಹೀಗಾಗಿ ಕಚೇರಿ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಿ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

ಅಕಾಡೆಮಿ ಮಾಲೀಕ ತಿರುಮಲ ವಿಂಜುಮರ್ ಸುದರ್ಶನ್, ಶಹಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಶಹಾಪುರ ಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details