ಕರ್ನಾಟಕ

karnataka

ETV Bharat / state

ನಟಿಯರ ಆಪ್ತರ ಮೊಬೈಲ್ ನೋಡಿ ಶಾಕ್ ಆದ ಸಿಸಿಬಿ ಅಧಿಕಾರಿಗಳು: ಅಷ್ಟಕ್ಕೂ ಅದರಲ್ಲಿ ಇದ್ದದ್ದೇನು ಗೊತ್ತಾ? - Sandalwood drugs Mafia update news

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ನಂಟು ಆರೋಪಕ್ಕೆ ಸಂಬಂಧಿಸಿದಂತೆ ರವಿಶಂಕರ್, ರಾಹುಲ್ ಹಾಗೂ ಕಾರ್ತಿಕ್ ನ ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಡ್ರಗ್ಸ್ ಮಾರಾಟದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ನಟಿಯರ ಆಪ್ತರ ಮೊಬೈಲ್ ನೋಡಿ ಶಾಕ್ ಆದ ಸಿಸಿಬಿ ಅಧಿಕಾರಿಗಳು
ನಟಿಯರ ಆಪ್ತರ ಮೊಬೈಲ್ ನೋಡಿ ಶಾಕ್ ಆದ ಸಿಸಿಬಿ ಅಧಿಕಾರಿಗಳು

By

Published : Sep 4, 2020, 10:05 AM IST

Updated : Sep 4, 2020, 10:18 AM IST

ಬೆಂಗಳೂರು: ಸಿಸಿಬಿ ವಶದಲ್ಲಿರುವ ನಟಿ ಮಣಿಯರಿಗೆ ಬಿಗ್ ಶಾಕ್ ಉಂಟಾಗಿದೆ. ಈಗಾಗಲೇ ನಟಿಯರ ಆಪ್ತರಾದ ರವಿಶಂಕರ್, ರಾಹುಲ್ ಹಾಗೂ ಕಾರ್ತಿಕ್ ನ ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮೊಬೈಲ್ ನಲ್ಲಿ ಡ್ರಗ್ಸ್ ಮಾರಾಟದ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ ಎನ್ನಲಾಗ್ತಿದೆ.

ರಾಹುಲ್ ಮತ್ತು ರವಿಶಂಕರ್ ಮೊಬೈಲ್ ನ ರೋಚಕ ಕಹಾನಿ:
ಸಂಜನಾ ಗಲ್ರಾನಿ ಆಪ್ತ ರಾಹುಲ್ ಹಾಗೂ ರಾಗಿಣಿ ಆಪ್ತ ರವಿಶಂಕರ್ ಇಬ್ಬರ ಮೊಬೈಲ್ ನಿಂದ ಬಹಳಷ್ಟು ಮಾಹಿತಿ ಪತ್ತೆಯಾಗಿವೆ. ಸಂಜನಾ ಸ್ನೇಹಿತ ಕೇವಲ ಡ್ರಗ್ಸ್ ಮತ್ತು ಕ್ಯಾಸಿನೋ ಡೀಲ್ ಅಷ್ಟೇ ಮಾಡುತ್ತಿಲ್ಲ, ಕ್ಯಾಸಿನೋದಲ್ಲಿ ಪಾರ್ಟಿ ಆಯೋಜಿಸುತ್ತಿರೋದಾಗಿ ಪೊಲೀಸರಿಗೆ ರಾಹುಲ್‌ ಹೇಳಿದ್ದಾನೆ.‌ ಆದ್ರೆ ಆತನ ಮೊಬೈಲ್ ನೋಡಿ ಅಧಿಕಾರಿಗಳು ಗಾಬರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ರಾಹುಲ್ ಮೊಬೈಲ್​ನಲ್ಲಿ ಮೂರು ಸಾವಿರ ಫೋಟೋ ಮತ್ತು ವಿಡಿಯೋಗಳಿವೆ. ಅದರಲ್ಲಿ ಸಿನಿಮಾ, ಸೀರಿಯಲ್, ಮಾಡೆಲ್ ಗಳ ಫೋಟೋ ಮತ್ತು ವಿಡಿಯೋಗಳು ಗ್ಯಾಲರಿಯಲ್ಲಿ ತುಂಬಿವೆ. ಹಾಗೆ ಅಶ್ಲೀಲ ಫೋಟೋಗೆ ಬೇರೆ ಗ್ಯಾಲರಿ ಮಾಡಿದ್ದ ರಾಹುಲ್, ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಇದೆಲ್ಲಾ ಕಾಮನ್ ಅಂತ ಪೊಲೀಸರಿಗೆ ತಿಳಿಸಿದ್ದಾನೆ‌ ಎನ್ನಲಾಗ್ತಿದೆ.

ಅಷ್ಟೇ ಅಲ್ಲದೆ ರಾಹುಲ್ ಚಾಟ್ ಲಿಸ್ಟ್ ನೋಡಿ ಕೂಡ ಪೊಲೀಸರಿಗೆ ಶಾಕ್ ಆಗಿದೆಯಂತೆ. ಯಾಕಂದ್ರೆ ಬಹಳಷ್ಟು ಮಂದಿ ಹುಡುಗಿಯರು ಫೋಟೋ ಕಳುಹಿಸಿದ್ದು, ಆ ಫೋಟೋಗಳಿಗೆ ವ್ಹಾವ್, ಓಕೆ ಎಂದು ಥಮ್ಸ್ ಅಪ್ ಸಿಂಬಲ್ ರಿಪ್ಲೇ ಮಾಡಿದ್ದಾನೆ. ಸದ್ಯ ಬಹುತೇಕ ಸಹ ಕಲಾವಿದರು ಮತ್ತು ಮಾಡೆಲ್​ಗಳೇ ಆಗಿದ್ದಾರೆ. ಈ ಫೋಟೋ ಹಾಗೂ ಹುಡುಗಿಯರನ್ನು ಬಳಸಿಕೊಂಡು ರಾಹುಲ್ ಬೇರೆ ವ್ಯವಹಾರ ಮಾಡ್ತಿದ್ದಾನೆ ಅನ್ನೋ ಅನುಮಾನ ಪೊಲೀಸರಿಗೆ ವ್ಯಕ್ತವಾಗಿದೆ.

ಇದು ರಾಹುಲ್ ಕಥೆಯಾದ್ರೆ ರವಿಶಂಕರ್​ದು ಮತ್ತೊಂದು ಕಥೆ. ರವಿ ಶಂಕರ್ ಗ್ಯಾಲರಿಯಲ್ಲಿ ರಾಗಿಣಿ ಫೋಟೋಗಳೇ ಹೆಚ್ಚು. ರಾಗಿಣಿ ಜೊತೆ ತೆಗೆಸಿಕೊಂಡಿರುವ ಫೋಟೋಗಳಲ್ಲಿ ಕೆಲವು ಆಪ್ತವಾಗಿ ಕ್ಲಿಕ್ಕಿಸಿರೋ ಫೋಟೋಗಳು ಸಹ ಇವೆ ಎಂದು ಹೇಳಲಾಗ್ತಿದೆ. ಸದ್ಯಕ್ಕೆ ಇದನ್ನೆಲ್ಲಾ ಮುಂದಿಟ್ಟುಕೊಂಡು ಪೊಲೀಸರು ತನಿಖೆ ಶುರುಮಾಡಿದ್ದಾರೆ.

Last Updated : Sep 4, 2020, 10:18 AM IST

ABOUT THE AUTHOR

...view details