ಬೆಂಗಳೂರು: ಸದಾ ಕೆಲಸದಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಆಪ್ತರ ಜೊತೆ ಖಾಸಗಿ ಹೋಟೆಲ್‌ನಲ್ಲಿ ಭೋಜನ ಸೇವಿಸಿದರು.
ರಿಲ್ಯಾಕ್ಸ್ ಮೂಡ್‌ನಲ್ಲಿ ಯಡಿಯೂರಪ್ಪ.. ಆಪ್ತರೊಂದಿಗೆ ಭೋಜನ ಸೇವನೆ - B.S yediyurappa latest news
ಕೊರೊನಾದಿಂದ ಗುಣಮುಖರಾಗಿ ಮರಳಿದ ನಂತರ ಹೊರಗೆಲ್ಲೂ ತೆರಳದ ಸಿಎಂ ನಿವಾಸದಲ್ಲೇ ಇದ್ದರು. ಆಪ್ತರ ಜೊತೆ ಖಾಸಗಿಯಾಗಿ ಕಾಲ ಕಳೆದಿರಲಿಲ್ಲ..
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಭೇಟಿ ನೀಡಿದ ಸಿಎಂ ಬಿ ಎಸ್ ಯಡಿಯೂರಪ್ಪ, ಮಧ್ಯಾಹ್ನದ ಭೋಜನ ಸೇವಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಎಸ್ ಆರ್ ವಿಶ್ವನಾಥ್, ಎಂ ಪಿ ರೇಣುಕಾಚಾರ್ಯ, ಕರ್ನಾಟಕ ಜಲಭವನ ಮಂಡಳಿ ಅಧ್ಯಕ್ಷ ರಾಜುಗೌಡ, ಶಂಕರ್ ಪಾಟೀಲ್ ಮುನೇನಕೊಪ್ಪ ಸಿಎಂ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ್ದರು.
ಈ ವೇಳೆ ಅನೌಪಚಾರಿಕವಾಗಿ ಕೆಲಕಾಲ ರಾಜ್ಯ ರಾಜಕೀಯ ಕುರಿತು ಮಾತುಕತೆ ನಡೆಸಲಾಯಿತು ಎನ್ನಲಾಗಿದೆ. ಕೊರೊನಾದಿಂದ ಗುಣಮುಖರಾಗಿ ಮರಳಿದ ನಂತರ ಹೊರಗೆಲ್ಲೂ ತೆರಳದ ಸಿಎಂ ನಿವಾಸದಲ್ಲೇ ಇದ್ದರು. ಆಪ್ತರ ಜೊತೆ ಖಾಸಗಿಯಾಗಿ ಕಾಲ ಕಳೆದಿರಲಿಲ್ಲ. ಹಾಗಾಗಿ, ಇಂದು ಆಪ್ತರ ಜೊತೆ ಭೋಜನ ಕೂಟದ ನೆಪದಲ್ಲಿ ಸಿಎಂ ಕೆಲಕಾಲ ಮಾತುಕತೆ ನಡೆಸಿದರು.