ಬೆಂಗಳೂರು :ಪ್ರೀತಿಸುವುದಾಗಿ ನಂಬಿಸಿ ಯುವತಿಯೊಂದಿಗೆ ಕಳೆದಿದ್ದ ಕ್ಷಣಗಳನ್ನು ವಿಡಿಯೋ ಮಾಡಿ ಪದೇಪದೆ ಕಿರುಕುಳ ನೀಡುತ್ತಾ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಅಡ್ಡಕಸುಬಿಯನ್ನು ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ.
ಯುವತಿ ಜತೆಗಿನ ಖಾಸಗಿ ದೃಶ್ಯ ಸೆರೆ ಹಿಡಿದು ಬ್ಲ್ಯಾಕ್‌ಮೇಲ್.. ಅಡ್ಡಕಸುಬಿಯ ಚಳಿ ಬಿಡಿಸಿದ ಜನರು.. ಇಂತವರಿಗೆ ಹೀಗೇ ಆಗಬೇಕು! - ಬ್ಲಾಕ್ ಮೇಲ್
ಯುವತಿಯೊಂದಿಗೆ ಕಳೆದಿದ್ದ ಕ್ಷಣಗಳನ್ನು ವಿಡಿಯೋ ಮಾಡಿ ಪದೇಪದೆ ಕಿರುಕುಳ ನೀಡುತ್ತಾ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಭೂಪನನ್ನು ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬಿಗ್ಬಜಾರ್ನಲ್ಲಿ ನೊಂದ ಯುವತಿ ಹಾಗೂ ಆರೋಪಿ ಸುನೀಲ್ ಕೆಲಸ ಮಾಡುತ್ತಿದ್ದರು. ಇಬ್ಬರ ಮಧ್ಯೆದ ಪರಿಚಯ ಮುಂದೆ ಸ್ನೇಹವಾಗಿತ್ತು. ಅದೇ ಮುಂದೆ ಪ್ರೀತಿಗೆ ತಿರುಗಿದೆ. ನಂತರ ಸೆಪ್ಟೆಂಬರ್ 18ರಂದು ಯುವತಿ ಮನೆಗೆ ಹೋಗಿದ್ದ ಸುನೀಲ್ ಆಕೆಯನ್ನು ಪುಸಲಾಯಿಸಿ ಆಕೆ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದಾನೆ. ಅದನ್ನು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಾ ಬಂದಿದ್ದಾನೆ.
ಇದೀಗ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ ಸದಸ್ಯರು ಸುನೀಲ್ ಮನೆಗೆ ನುಗ್ಗಿ ಆತನನ್ನು ಥಳಿಸಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುನೀಲ್ನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.