ಕರ್ನಾಟಕ

karnataka

ETV Bharat / state

ಲಂಚ ಪಡೆಯುತ್ತಿದ್ದ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ - Kodagu district news

ಮನೆ ಆಸೆ ತೋರಿಸಿ ನಿರಾಶ್ರಿತರಿಗೆ ಮೀಸಲಿರಿಸಿದ್ದ ಮನೆ ಕೊಡಿಸುವುದಾಗಿ ಹೇಳಿ ಲಂಚ ಪಡೆದ ಆರೋಪದ ಮೇಲೆ ನಗರಸಭೆ ಬಿಲ್ ಕಲೆಕ್ಟರ್​ನನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Madikeri acb attack news
Madikeri acb attack news

By

Published : Jun 5, 2020, 7:25 PM IST

ಮಡಿಕೇರಿ:ಮನೆ ಆಸೆ ತೋರಿಸಿ ನಿರಾಶ್ರಿತರಿಗೆ ಮೀಸಲಿರಿಸಿದ್ದ ಮನೆ ಕೊಡಿಸುವುದಾಗಿ ಹೇಳಿ ಲಂಚ ಪಡೆದ ಆರೋಪದ ಮೇಲೆ ನಗರಸಭೆ ಬಿಲ್ ಕಲೆಕ್ಟರ್​ನನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮಡಿಕೇರಿ ಸಮೀಪದ ನಿವಾಸಿ ಗಣೇಶ್ ಎಂಬಾತನಿಗೆ ಮನೆ ಆಸೆ ತೋರಿಸಿ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಬಳಿಕ ಹಣದೊಂದಿಗೆ ಮಡಿಕೇರಿ ಎಪಿಎಂಸಿ ಪ್ರಾಂಗಣಕ್ಕೆ ಬರುವಂತೆ ಹೇಳಿದ್ದು, ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಲೋಹಿತ್ ಎಂಬ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.

ಲಂಚ ಪಡೆದ ಆರೋಪ ಎದುರಿಸುತ್ತಿರುವ ಲೋಹಿತ್ ವಿರುದ್ಧ ಹಲವು ದೂರುಗಳು ಈ ಹಿಂದೆ ಕೂಡಾ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು ಎನ್ನಲಾಗಿದೆ.

ABOUT THE AUTHOR

...view details