ಕರ್ನಾಟಕ

karnataka

ಸುಶಾಂತ್ ಸಿಂಗ್ ಪ್ರಕರಣ: ಬೆಂಗಳೂರು ಕಾರ್ಪೊರೇಟರ್ ಪುತ್ರನಿಗೂ ನಂಟು?

By

Published : Sep 6, 2020, 12:53 PM IST

Updated : Sep 6, 2020, 1:16 PM IST

ಸುಶಾಂತ್ ಸಿಂಗ್ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಎನ್​ಸಿಬಿ ಕಚೇರಿಗೆ ಸೆ. 7 ರಂದು ಹಾಜರಾಗುವಂತೆ ಕಾರ್ಪೊರೇಟರ್ ಪುತ್ರ ಯಶಸ್ ಗೆ ಎನ್​ಸಿಬಿ ನೋಟಿಸ್ ನೀಡಿದೆ.

ಸುಶಾಂತ್ ಸಿಂಗ್,  ಬೆಂಗಳೂರು ಕಾರ್ಪೊರೇಟರ್ ಪುತ್ರ
ಸುಶಾಂತ್ ಸಿಂಗ್, ಬೆಂಗಳೂರು ಕಾರ್ಪೊರೇಟರ್ ಪುತ್ರ

ಬೆಂಗಳೂರು: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೂ ಕಾರ್ಪೊರೇಟರ್ ಪುತ್ರ ಯಶಸ್ ಗೂ ಲಿಂಕ್ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗ್ತಿದೆ.

ಮುಂಬೈನಲ್ಲಿ ಬಂಧಿತನಾಗಿರುವ ಡ್ರಗ್ಸ್ ಮಾಫಿಯಾ ಕಿಂಗ್ ಪಿನ್ ಮೊಹಮ್ಮದ್ ರೆಹಮಾನ್ ಗೂ ಮತ್ತು ಯಶಸ್ ಗೂ ನಂಟಿದೆ ಎಂದು ಹೇಳಲಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಕೇಸ್ ನಲ್ಲಿ ಬಂಧಿತರಾಗಿರುವ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಹಾಗೂ ಸುಶಾಂತ್ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಂಡಾ ಗೆ ಡ್ರಗ್ಸ್ ಒದಗಿಸುತ್ತಿದ್ದುದು ಇದೇ ರೆಹಮಾನ್ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.

ಕಾರ್ಪೊರೇಟರ್ ಮನೆ ಮೇಲೆ ಎನ್​ಸಿಬಿ ದಿಢೀರ್ ದಾಳಿ: ಕೇಶವಮೂರ್ತಿ ಪುತ್ರನಿಗೆ ನೋಟಿಸ್

ರೆಹಮಾನ್ ದೇಶದ ಪ್ರತಿಷ್ಠಿತ ಪಾರ್ಟಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ. ಈತ ಪ್ರಮುಖ ಡ್ರಗ್ ಪೆಡ್ಲರ್ ರಾಗಿದ್ದು, ರಾಜಾಜಿನಗರದ ಕಾರ್ಪೊರೇಟರ್ ಮಗ ಯಶಸ್ ಹಾಗೂ ಎನ್​ಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಅನಿಕಾ, ಅನೂಪ್, ಶೋವಿಕ್, ಮಿರಂಡಾ ಇವರಿಗೆಲ್ಲರಿಗೂ ರೆಹಮಾನ್ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎನ್ನಲಾಗ್ತಿದೆ.

ಜುಲೈ 10 ರಂದು ರೆಹಮಾನ್ಅನ್ನು ಬಂಧಿಸಿದ್ದ ಮುಂಬೈ ವಲಯದ ಎನ್ ಸಿ ಬಿ ಅಧಿಕಾರಿಗಳು, ಪ್ರಸ್ತುತ ಸುಶಾಂತ್ ಪ್ರಕರಣಕ್ಕೂ ಬೆಂಗಳೂರಿಗೂ ಲಿಂಕ್ ಇದೆ ಎಂದು ರುಜುವಾತು ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಮುಂಬೈ ಎನ್ ಸಿ ಬಿ ಕಚೇರಿಗೆ ಸೆ. 7 ರಂದು ಹಾಜರಾಗುವಂತೆ ಯಶಸ್ ಗೆ ಎನ್ ಸಿ ಬಿ ನೋಟಿಸ್ ನೀಡಿದೆ.

Last Updated : Sep 6, 2020, 1:16 PM IST

ABOUT THE AUTHOR

...view details