ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಆರಂಭ - Bandipur National Park Safari
ಲಾಕ್‌ಡೌನ್ ಬಳಿಕ ಬಂಡಿಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಆರಂಭಗೊಂಡಿದ್ದು, ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
![ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಆರಂಭ Beginning of Bandipur National Park Safari](https://etvbharatimages.akamaized.net/etvbharat/prod-images/768-512-11:58-ka-cnr-gpt-03-safaristart-av-kac10015-08062020203630-0806f-1591628790-729.jpg)
ಗುಂಡ್ಲುಪೇಟೆ:ಬಂಡಿಪುರ ರಾಷ್ಟ್ರೀಯ ಉದ್ಯಾನವನ ಸಫಾರಿ ಆರಂಭವಾಗಿದ್ದು ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಆಗಿದ್ದ ಸಫಾರಿ 70 ದಿನದ ಬಳಿಕ ಸೋಮವಾರ ಮತ್ತೆ ಆರಂಭವಾಯಿತು. ಸಫಾರಿಗೆ ತೆರಳುವವರ ಕೈಗೆ ಸ್ಯಾನಿಟೈಸರ್ ಹಾಕಿ ವಾಹನ ಹತ್ತಿಸಲಾಯಿತು.
ಸಫಾರಿ ಜೀಪ್‌ನಲ್ಲಿ ನಾಲ್ಕು ಮಂದಿ, ಬಸ್‌ನಲ್ಲಿ ಮೂವತ್ತು ಮಂದಿಯ ಬದಲು ಹದಿನೈದು ಮಂದಿಯನ್ನು ಹತ್ತಿಸಲು ಯೋಜನೆ ಹಾಕಿಕೊಂಡಿದ್ದರು. ಸೋಮವಾರ ಬೆಳಿಗ್ಗೆ ಒಂದು ಜಿಪ್ಸಿಯಲ್ಲಿ ಮೂವರು ಮತ್ತು ಬಸ್‌ನಲ್ಲಿ 11 ಮಂದಿ, ಸಂಜೆ ಒಂದು ಜಿಪ್ಸಿ ಹಾಗೂ ಎರಡು ಬಸ್‌ನಲ್ಲಿ 15 ಮಂದಿ ಸಫಾರಿಗೆ ತೆರಳಿದರು.
ಬೆಳಿಗ್ಗೆಯೇ ಸಫಾರಿ ಸ್ಥಳಕ್ಕೆ ಎಸಿಎಫ್ ರವಿಕುಮಾರ್ ಮತ್ತು ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಭೇಟಿ ಮಾಡಿ ಪರಿಶೀಲಿಸಿದರು. ಖಾಸಗಿ ರೆಸಾರ್ಟ್‌ಗಳು ಯಾವುದೂ ತೆರೆದಿರಲಿಲ್ಲ.