ಕರ್ನಾಟಕ

karnataka

ETV Bharat / state

ನಿರಂತರ ಜ್ಯೋತಿ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ: ಕೆ.ಬಿ.ಪ್ರಸನ್ನ ಕುಮಾರ್ - Power supply in rural areas of Shivamogga

ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿರಂತರ ಜ್ಯೋತಿ ಯೋಜನೆಯಲ್ಲಿ 50 ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.

B-prasanna-kumar
ಕಾಂಗ್ರೆಸ್ ವಕ್ತಾರ ಕೆ. ಬಿ ಪ್ರಸನ್ನ ಕುಮಾರ್

By

Published : Jan 4, 2022, 10:56 PM IST

Updated : Jan 5, 2022, 10:07 AM IST

ಶಿವಮೊಗ್ಗ:ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿರಂತರ ಜ್ಯೋತಿ ಯೋಜನೆಯಲ್ಲಿ 50 ಕೋಟಿ ರೂ. ಅವ್ಯವಹಾರ ನಡೆದಿದೆ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ನಿರಂತರ ಜ್ಯೋತಿ ಯೋಜನೆಯೂ ಒಂದಾಗಿದೆ. ಜಿಲ್ಲೆಯಲ್ಲಿ 693 ಗ್ರಾಮಗಳಿವೆ. 24 ಗಂಟೆ ವಿದ್ಯುತ್ ಪೂರೈಕೆ ಮಾಡಲು ನಿರಂತರ ಜ್ಯೋತಿ ಯೋಜನೆಗೆ 240 ಕೋಟಿ ಕೊಡಲಾಗಿದೆ. 110 ಕೋಟಿಯನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ. ಇದರಲ್ಲಿ ಅವ್ಯವಹಾರವಾಗಿದೆ ಅಂತಾ ಮೊದಲೇ ತಿಳಿಸಿದ್ದೆವು ಎಂದರು.

ಕಾಂಗ್ರೆಸ್ ವಕ್ತಾರ ಕೆ. ಬಿ ಪ್ರಸನ್ನ ಕುಮಾರ್ ಮಾತನಾಡಿದರು

ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಸಭೆ ಕರೆದು ಐದು ಕೋಟಿ ರೂ. ಹೆಚ್ಚು ಪಾವತಿಯಾಗಿದೆ. ಅದನ್ನು ಸರಿ ಮಾಡಿಕೊಳ್ಳಬೇಕು ಎಂದು ಎಂಟು ತಿಂಗಳ ಹಿಂದೆ ಸಭೆಯಲ್ಲಿ ಹೇಳಿದ್ದರು. ಮತ್ತೊಂದು ಸಭೆ ಮಾಡಿ 12.29 ಕೋಟಿ ರೂ. ಅವ್ಯವಹಾರ ನಡೆದಿದೆ ಸರಿಮಾಡಿಕೊಳ್ಳಿ ಎಂದು ಜಿಲ್ಲಾ ಸಚಿವರು ಹೇಳುವ ಮೂಲಕ ಅವ್ಯವಹಾರ ಆಗಿದೆ ಅನ್ನುವುದು ಸಾಬೀತಾದಂತಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಅತಿಕ್ರಮಣಗೊಂಡಿದ್ದ ಜಾಗಗಳ ಮರಳಿ ಪಡೆದ ಬಿಡಿಎ: ₹300 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ವಶ

Last Updated : Jan 5, 2022, 10:07 AM IST

For All Latest Updates

TAGGED:

ABOUT THE AUTHOR

...view details