ಅಥಣಿ :ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳು ಕೋವಿಡ್ ಸಂಕಷ್ಟದ ಸಮಯದಲ್ಲಿ ಯಾವುದೇ ಅನಾವಶ್ಯಕ ಸಭೆ ನಡೆಸಬಾರದೆಂದು ನಿಯಮವಿದ್ದರೂ ಅಥಣಿಯಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ್ ಉಪ-ಕಾರ್ಯದರ್ಶಿಗಳಾದ ಎ.ಬಿ. ಜಕ್ಕಪ್ಪನವರ ಕೋವಿಡ್ ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಪಿಡಿಒಗಳ ಸಭೆ ನಡೆಸಿದ್ದಾರೆ .
ಜಿಲ್ಲಾ ಪಂಚಾಯತ್ ಉಪ-ಕಾರ್ಯದರ್ಶಿಗಳಾದ ಎ ಬಿ ಜಕ್ಕಪ್ಪನವರ ಕೋವಿಡ್ ನಿಯಮ ಗಾಳಿಗೆ ತೂರಿ ತಾಲೂಕಾ ಮಟ್ಟದಲ್ಲಿ ಪಿಡಿಒಗಳ ಸಭೆ ನಡೆಸಿದರು.
ಅಗತ್ಯವಿದ್ದರೆ ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶವಿದ್ದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತಿಲ್ಲ ಎನ್ನುವುದಕ್ಕೆ ಇಂದಿನ ಸಭೆಯೇ ಸಾಕ್ಷಿಯಾಗಿದೆ. ಅಲ್ಲದೆ, ಸಭೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಕಂಡು ಬರಲಿಲ್ಲ.
ಸೋಂಕಿತರಿಗೆ ಬೇಡ್ ಸಿಗುತ್ತಿಲ್ಲ ಎಂದು ನರಳಾಡುವ ದೃಶ್ಯ ವಿಷಯ ಗೊತ್ತಿದ್ದರೂ ಅದರ ಬಗ್ಗೆ ಕನಿಷ್ಠ ಚಿಂತಿಸುವ ಗೊಜಿಗೂ ಹೋಗಿಲ್ಲ. ಸಭೆಯಲ್ಲಿ ಗ್ರಾಮ ಪಂಚಾಯತ್ ತೆರಿಗೆ ವಸೂಲಿ ಕಡ್ಡಾಯ ಮಾಡಬೇಕು.
ಉದ್ಯೋಗ ಖಾತ್ರಿ ಯೋಜನೆ ಜೋರಾಗಿ ಆರಂಭಿಸಬೇಕು. ಸ್ವಚ್ಛ ಭಾರತ ಯೋಜನೆ ಕ್ರಿಯಾ ಯೋಜನೆ ಕುರಿತು 14ನೇ ಹಣಕಾಸಿನ ಖರ್ಚು ವೆಚ್ಚದ ಬಗ್ಗೆ ಹತ್ತು ಹಲವು ವಿಷಯಗಳನ್ನು ಚರ್ಚೆ ಮಾಡಿದರು.
ಅಥಣಿ ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಎರಡನೆ ಅಲೆ ದಿನೆ ದಿನೆ ಕೈ ಮೀರಿ ಅಬ್ಬರಿಸುತ್ತಿದೆ. ಜನರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯ ಗಳಲ್ಲಿ ಸ್ಥಳ ಸಿಗದೆ ಆಕ್ಷಿಜನ್ ಸಿಗದೆ ಇಂಜೆಕ್ಸನ್ ಸಿಗದೆ ಒದ್ದಾಡಿ ಸಾಯುತ್ತಿರುವಾಗ ಈ ಸಭೆ ಬೇಕಾ? ದಿನಾಲೂ ಸಾವಿನ ಸಂಖ್ಯೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೇರಿ ಸುಮಾರು 25 ಗಡಿ ಸಮಿಪಿಸುತ್ತಿದೆ.