ಬೆಳಗಾವಿ: ಜೀವಂತ ಗುಂಡು ಸಮೇತ ಪ್ರಯಾಣ ಬೆಳೆಸುತ್ತಿದ್ದ ಯೋಧನನ್ನು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಭದ್ರತಾ ಪಡೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಮಾನ ನಿಲ್ದಾಣದ ಕೆಎಸ್ಐಎಸ್ಎಫ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಸುಬೇದಾರ್ ಅರುಣ್ ಭೋಸಲೆ ಬಳಿ ಒಂದು ಎಕೆ 47 ಜೀವಂತ ಗುಂಡು ಪತ್ತೆಯಾಗಿದೆ. ಜೊತೆಗೆ ಒಂದು ಇನ್ಸಾಸ್ ಫೈರ್ಡ್ ಎಂಪ್ಟಿ ಕೇಸ್ ಸಹ ದೊರೆತಿದೆ.
ಸುಬೇದಾರ್ ಅರುಣ್ ಭೋಸಲೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೈನಿಕನನ್ನು ಪೊಲೀಸರು ಎಂಎಲ್‌ಐಆರ್‌ಸಿ ವಶಕ್ಕೆ ನೀಡಿದ್ದಾರೆ.
ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಅಧಿಕಾರಿಗಳು ಸೈನಿಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.